ಲಾಡೆನ್ ಗೆ ಆತಿಥ್ಯ ನೀಡಿದವರು ನಮಗೆ ಉಪದೇಶ ನೀಡುವ ಅರ್ಹತೆ ಹೊಂದಿಲ್ಲ: ಪಾಕ್ ಗೆ ಜೈಶಂಕರ್ ಚಾಟಿ

ವಿಶ್ವಸಂಸ್ಥೆ: ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತವು ಬಲವಾಗಿ ತಿರುಗೇಟು ನೀಡಿದೆ. ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಗೆ ಆತಿಥ್ಯ ನೀಡಿದ ಮತ್ತು ನೆರೆ ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶವು “ಪ್ರವಚನ” ಮಾಡುವ ಅರ್ಹತೆಯನ್ನು ಹೊಂದಿಲ್ಲ ಎಂದು ಖಡಕ್ ಉತ್ತರ ನೀಡಿದೆವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯು ಸಾಂಕ್ರಾಮಿಕ ರೋಗಗಳು, ಹವಾಮಾನ ಬದಲಾವಣೆ, ಸಂಘರ್ಷಗಳು ಅಥವಾ ಭಯೋತ್ಪಾದನೆ ನಮ್ಮ ಕಾಲದ ಪ್ರಮುಖ ಸವಾಲುಗಳಿಗೆ ಅದರ ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.“ನಾವು ಇಂದು ಬಹುಪಕ್ಷೀಯತೆಯನ್ನು ಸುಧಾರಿಸುವ ತುರ್ತುಸ್ಥಿತಿಯ ಮೇಲೆ ಗಮನಹರಿಸಿದ್ದೇವೆ. ನಾವು ನಮ್ಮ ನಿರ್ದಿಷ್ಟ ಅಭಿಪ್ರಾಯವನ್ನು ಹೊಂದಿದ್ದೇವೆ" ಎಂದು ಜೈಶಂಕರ್ ಹೇಳಿದರು.