ರೌಡಿಗಳು ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಲು ಪರೇಡ್ ಮಾಡುತ್ತಿದ್ದಾರೆ!: ಕಾಂಗ್ರೆಸ್

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ರೌಡಿ ಶೀಟರ್ಗಳು ರಾಜಕೀಯ ಎಂಟ್ರಿಯಾಗುತ್ತಿರುವ ವಿಚಾರ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿವೆ. ಈ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್, ಪೊಲೀಸರ ಎದುರು ಪರೇಡ್ ಮಾಡುತ್ತಿದ್ದ ರೌಡಿಗಳು ಈಗ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಲು ಪರೇಡ್ ಮಾಡುತ್ತಿದ್ದಾರೆ! ರೌಡಿಗಳ ಸಮರ್ಥನೆಗೆ ಇಳಿದಿದ್ದು, ಬೆಂಗಳೂರಿನಲ್ಲಿ ಕ್ರೈಮ್ ರೇಟ್ ಜಾಸ್ತಿಯಾಗಿದೆ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದೆ