ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು

ಮಂಡ್ಯ : ನಗರದ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಬೆಳಿಗ್ಗೆ 9.10 ರ ಸುಮಾರಿಗೆ ಸಂಭವಿಸಿದೆ.
ಬೆಂಗಳೂರಿನಿಂದ ಮಂಡ್ಯಕ್ಕೆ ಬಂದಿಳಿದ ಕಾಚಿಗೂಡ ರೈಲಿನಿಂದ ಬಂದಿಳಿದ ಮಹಿಳೆಯರು ಮೈಸೂರಿನಿಂದ ಬರುತ್ತಿದ್ದ ಮೈಲಾಡು ತೊರೈ ರೈಲು ಬರುತ್ತಿರುವುದು ಗಮನಕ್ಕೆ ಬಾರದೆ ತರಾತುರಿಯಲ್ಲಿ ರೈಲು ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದಾರೆ.
ಸ್ಥಳಕ್ಕೆ ರೈಲ್ವೆ ಪೋಲಿಸರು ಬಂದು ಅವರ ಬ್ಯಾಗ್ ಗಳನ್ನು ಏನಾದರೂ ಮಾಹಿತಿ ದೊರಕಬಹುದೆಂದು ಪರಿಶೀಲನೆ ಮಾಡುತ್ತಿದ್ದಾರೆ.