ಲಂಡನ್ ಕಂಪನಿಯಲ್ಲಿ ಮೊದಲ ಕೆಲಸ.. ರಾಹುಲ್ ಗಾಂಧಿ ಪಡೆದ ಫಸ್ಟ್ ಸ್ಯಾಲರಿ ಎಷ್ಟು ಗೊತ್ತಾ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೊದಲ ಕೆಲಸ ಮತ್ತು ತೆಗೆದುಕೊಂಡಿರುವ ಸಂಬಳದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕರ್ಲಿ ಟೇಲ್ಸ್ ಸಿಇಒ ಕಾಮಿಯಾ ಜಾನಿ ಅವರು ನಡೆಸಿದ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.ರಾಹುಲ್ ಗಾಂಧಿ ಅವರು ತಮ್ಮ 25ನೇ ವಯಸ್ಸಿನಲ್ಲಿ ಲಂಡನ್ನ ತಂತ್ರ ಸಲಹೆ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಇದು ಅವರು ಮೊದಲ ಬಾರಿಗೆ ಸೇರಿಕೊಂಡ ಕೆಲಸವಾಗಿದೆ.ಕಾಮಿಯಾ ಜಾನಿ ಅವರು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ''ಆ ಸಮಯದಲ್ಲಿ ನನ್ನ ಮೊದಲ ವೇತನ ಚೆಕ್ ಮೂಲಕ ಸಿಕ್ಕಿತ್ತು. ಆದರೆ ಅದು ಬಾಡಿಗೆ ಕಟ್ಟಲು ಸರಿಯಾಯಿತು. ಅಂದು ನನಗೆ ಸುಮಾರು 3 ಸಾವಿರ ವೇತನವ ಆಗಿ ಸಿಕ್ಕಿತು. ಆಗ ನನಗೆ 25 ವರ್ಷ'' ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ