ರಾಮನಗರದಲ್ಲಿ 'ಪೊಲೀಸರ ಭರ್ಜರಿ ಕಾರ್ಯಾಚರಣೆ ' : ಅಕ್ರಮವಾಗಿ ಗಾಂಜಾ ಸಾಗಿಸ್ತಿದ್ದ' ನಾಲ್ವರು ಆರೋಪಿಗಳ ಅರೆಸ್ಟ್

ರಾಮನಗರ :ನಗರದಲ್ಲಿ ಜಿಲ್ಲಾ ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು, ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಗಾಂಜಾ ಸಾಗಿಸುತ್ತಿದ್ದ ಆಯೂಬ್ ಪಾಷಾ, ಶಬ್ಬೀರ್ ಪಾಷಾ, ಶಿವರಾಜು, ಸಚಿನ್ ಬಂಧಿತ ಆರೋಪಿಗಳೆಂದು ತಿಳಿಯಲಾಗಿದೆ. ಬಂಧಿತರಿಂಧ 4 ಕೆ.ಜಿ 350 ಗ್ರಾಂ ಗಾಂಜಾ, ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚನ್ನಪಟ್ಟಣದಿಂದ ರಾಮನಗರಕ್ಕೆ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಜಿಲ್ಲಾ ಅಬಕಾರಿ ಪೊಲೀಸರು ಜಪ್ತಿ ನಡೆಸಿದ್ದಾರೆ. ಆಗ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವುದು ಪತ್ತೆಯಾಗಿತ್ತು, ಈ ಬೆನ್ನಲ್ಲೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.