ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ; ರಾಜ್ಯ ಆರೋಗ್ಯ ಇಲಾಖೆಗಳ ಜತೆ ಕೇಂದ್ರ ಆರೋಗ್ಯ ಇಲಾಖೆಗಳ ಮಹತ್ವದ ಸಭೆ

ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ; ರಾಜ್ಯ ಆರೋಗ್ಯ ಇಲಾಖೆಗಳ ಜತೆ ಕೇಂದ್ರ ಆರೋಗ್ಯ ಇಲಾಖೆಗಳ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಇದರಿಂದ ಜನರಿಗೆ ಮತ್ತೆ ಭಯದ ಭೀತಿ ಎದುರಾಗಿದೆ. ನಿನ್ನೆ ಹೊಸದಾಗಿ 209 ಮಂದಿ ಕೊರೋನಾ ಪಾಸಿಟಿವ್‌ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸಂಕ್ರೀಯ ಸೋಂಕಿತರ ಸಂಖ್ಯೆ 792ಕ್ಕೆ ಏರಿಕೆಯಾಗಿದೆ.

ಹೀಗಾಗಿ ಇಂದು ರಾಜ್ಯ ಆರೋಗ್ಯ ಇಲಾಖೆಗಳ ಜೊತೆ ಕೇಂದ್ರ ಆರೋಗ್ಯ ಇಲಾಖೆ ಮತ್ತು ICMR ಮಹತ್ವದ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿದ್ದಂತೆ ಕೇಂದ್ರ ಇಲಾಖೆ ಫುಲ್‌ ಅಲರ್ಟ್‌ ಆಗಿದೆ. ಕೊವೀಡ್‌ನ ಮುಂಜಾಗೃತ ಕ್ರಮವಾಗಿ ಮಾಕ್ ಡ್ರಿಲ್‌ಗೆ ಮುಂದಾಗಿದೆ. ದೇಶವ್ಯಾಪಿ ಆಸ್ಪತ್ರೆಗಳ ಸನ್ನದ್ದತೆ ಪರೀಕ್ಷೆಗಾಗಿ ಮಾಕ್ ಡ್ರೀಲ್‌ಗೆ ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಏಪ್ರಿಲ್ 10, 11 ರಂದು ದೇಶವ್ಯಾಪಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅಣುಕು ಪ್ರದರ್ಶನ ನಡೆಯಲಿದೆ.
ಈ ವಿಚಾರವಾಗಿ ಇಂದು ರಾಜ್ಯಗಳ ಆರೋಗ್ಯಾಧಿಕಾರಿಗಳ ಸಭೆ ನಡೆಯಲಿದೆ. ಅಣಕು ಡ್ರಿಲ್‌ನಲ್ಲಿ ಆರೋಗ್ಯ ಸೌಲಭ್ಯಗಳ ಲಭ್ಯತೆ, ಹಾಸಿಗೆಗಳ ಸಾಮರ್ಥ್ಯದ ಕುರಿತು ಚರ್ಚೆ ನಡೆಯಲಿದೆ.

ಇನ್ನು ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಭಾನುವಾರ 7021 ಮಂದಿಯನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳೂರು ಗ್ರಾಮಾಂತರ 07, ಬೆಂಗಳೂರು ನಗರ 120, ಬೀದರ್ ಮತ್ತು ಚಿಕ್ಕಬಳ್ಳಾಪುರ 03, ದಕ್ಷಿಣ ಕನ್ನಡ, ದಾವಣಗೆರೆ ಮತ್ತು ಕೋಲಾರ ಜಿಲ್ಲೆಯಲ್ಲಿ ತಲಾ ಇಬ್ಬರು, ಧಾರವಾಡ ಮತ್ತು ರಾಯಚೂರು 04, ಹಾಸನ, ಕೊಡಗು, ಉತ್ತರ ಕನ್ನಡ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೋನಾ ದೃಢಪಟ್ಟಿದೆ ಎನ್ನಲಾಗಿದೆ.

ಶಿವಮೊಗ್ಗ 50, ಮೈಸೂರು 08 ಸೇರಿದಂತೆ 209 ಮಂದಿಗೆ ಪಾಸಿಟಿವ್ ಎಂದು ತಿಳಿದು ಬಂದಿದೆ. ಹೀಗಾಗಿ ಸೋಕಿತರ ಸಂಖ್ಯೆ40,76,348ಕ್ಕೆ ಏರಿಕೆಯಾಗಿದೆ. ಇಂದು 100 ಸೇರಿದಂತೆ ಈವರೆಗೆ 40,35,235 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದಾಗಿ ರಾಜ್ಯಾಧ್ಯಂತ ಈಗ 792 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.