ಯಡಿಯೂರಪ್ಪರನ್ನು ಸೈಡ್‌ ಲೈನ್‌ ಮಾಡುವ ಪ್ರಶ್ನೆಯೇ ಇಲ್ಲ- ವಿಜಯೇಂದ್ರ

ಯಡಿಯೂರಪ್ಪರನ್ನು ಸೈಡ್‌ ಲೈನ್‌ ಮಾಡುವ ಪ್ರಶ್ನೆಯೇ ಇಲ್ಲ- ವಿಜಯೇಂದ್ರ

ಬೆಂಗಳೂರು: ಬೆಂಗಳೂರು ಬಿ.ಎಸ್‌ ಯಡಿಯೂರಪ್ಪ ನಿವಾಸದಲ್ಲ್ಲಿ ಉಪಾಹಾರದ ಕೂಟ ಮುಕ್ತಾಯಗೊಂಡಿದೆ. ಈ ಬಳಿಕ ಬಿ.ಎಸ್‌ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಯಡಿಯೂರಪ್ಪರನ್ನು ಸೈಡ್‌ ಲೈನ್‌ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪಗೆ ಪಕ್ಷ ಎಲ್ಲವನ್ನೂ ನೀಡಿದೆ. .ನಾನು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ ಎಂದರು.

ಇಂದು ಕೇಂದ್ರ ಸಚಿವ ಅಮಿತ್‌ ಶಾ ನನ್ನನ್ನು ಮಾತಾಡಿಸಿದ್ದಕ್ಕೆ ಖುಷಿಯಾಗಿದೆ. ಪಕ್ಷದ ಕೆಲಸ ಮಾಡಲು ಇನ್ನಷ್ಟು ಶಕ್ತಿ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.

ಇನ್ನುಕೇಂದ್ರ ಸಚಿವ ಅಮಿತ್‌ ಶಾ ಬಿ.ಎಸ್‌ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಸ್ವಾಗತಿಸಿದ್ದಾರೆ. ಅಮಿತ್‌ ಶಾಗೆ ಹೂಗುಚ್ಛ ನೀಡಿ ಬಿ.ಎಸ್‌ ಯಡಿಯೂರಪ್ಪ ಸ್ವಾಗತಿಸುತ್ತಿದ್ದಾರೆ. ಹೀಗಾಗಿ ಅಮಿತ್‌ ಶಾ ವಿಜಯೇಂದ್ರನಿಗೆ ಕೊಡುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಎಸ್‌ ಯಡಿಯೂರಪ್ಪ ಕೈಯಲಿದ್ದ ಹೂಗುಚ್ಛವನ್ನು ವಿಜಯೇಂದ್ರರಿಗೆ ನೀಡಿದ್ದಾರೆ. ಬಳಿಕ ಅಮಿತ್‌ ಶಾಗೆ ಹೂಗೂಚ್ಛ ನೀಡಿ ಸ್ವಾಗತಿಸಿದ್ದಾರೆ. ಪ್ರತ್ಯೇಕವಾಗಿ ಹೂಗುಚ್ಛ ನೀಡಿ ಅಮಿತ್‌ ಶಾ ಸ್ವಾಗತಿಸಿದ್ದಾರೆ.ಬಿ.ಎಸ್‌ ಯಡಿಯೂರಪ್ಪ ಮನೆಯಲ್ಲಿ ಅಮಿತ್‌ ಶಾ ಉಪಾಹಾರ ಸೇವಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ನಳಿನ್‌ ಕುಮಾರ್‌ ಕಟೀಲು, ಸಚಿವ ಕಾರಜೋಳ ಸೇರಿದಂತೆ ಅನೇಕ ನಾಯಕರು ಇಡ್ಲಿ , ದೋಸೆ, ಪೊಂಗಲ್‌, ಉಪ್ಪಿಟ್ಟು ಸೇವಿಸುತ್ತಿದ್ದಾರೆ.