ಮೊದಲ ಮಗು ಕಳೆದುಕೊಂಡು ತುಂಬಾ ನೊಂದಿದ್ದ ಅಮೃತಾ ಪಾಲಿಗೆ 2ನೇ ಮಗುವೂ ಉಳಿಯಲಿಲ್ಲ. ಮನಕಲಕುತ್ತೆ ಈ ಸ್ಟೋರಿ

ಮೊದಲ ಮಗು ಕಳೆದುಕೊಂಡು ತುಂಬಾ ನೊಂದಿದ್ದ ಅಮೃತಾ ಪಾಲಿಗೆ 2ನೇ ಮಗುವೂ ಉಳಿಯಲಿಲ್ಲ. ಮನಕಲಕುತ್ತೆ ಈ ಸ್ಟೋರಿ

ಬೆಂಗಳೂರು: 'ನನ್ನಮ್ಮ ಸೂಪರ್​ ಸ್ಟಾರ್​' ರಿಯಾಲಿಟಿ ಶೋ ಖ್ಯಾತಿಯ 6 ವರ್ಷದ ಬಾಲಕಿ ಸಮನ್ವಿ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಸಮನ್ವಿ ತಾಯಿ, ಖ್ಯಾತ ನಿರೂಪಕಿ ಅಮೃತಾ ನಾಯ್ಡು ಅವರ ಕರುಣಾಜಕನ ಕಥೆ ಕೇಳಿದ್ರೆ ಕರುಳು ಹಿಂಡುತ್ತೆ.

ಆ ದುರ್ವಿಧಿಯನ್ನ ಮನದಲ್ಲೇ ಶಪಿಸುತ್ತಾ, ಯಾವ ತಾಯಿಗೂ ಇಂಥ ನೋವು ಕೊಡ ಬೇಡ ದೇವ್ರೇ ಎಂದು ಬೇಡಿಕೊಳ್ತೀರಿ…

ಕೋಣನಕುಂಟೆ ಬಳಿಯ ವಾಜರಹಳ್ಳಿಯಲ್ಲಿ ನಿನ್ನೆ(ಗುರುವಾರ) ಸಂಭವಿಸಿದ ಅಫಘಾತದಲ್ಲಿ ಮೃತಪಟ್ಟ ಸಮನ್ವಿ ಅಮೃತಾ ನಾಯ್ಡು ಅವರ 2ನೇ ಮಗು. ಅಮೃತಾರ ಮೊದಲ ಮಗು ಹೆರಿಗೆ ಆದಾಗಲೇ ಮೃತಪಟ್ಟಿತ್ತು. ಮಗು ಕಳೆದುಕೊಂಡು ನೋವಿನಲ್ಲೇ ಮುಳುಗಿದ್ದ ಅಮೃತಾರ ಬದುಕಿಗೆ ಬೆಳಕು ಬಂದದ್ದು 2ನೇ ಮಗು ಸಮನ್ವಿ ಹುಟ್ಟಿದಾಗ. ಸಮನ್ವಿಯೇ ಅಮೃತಾಗೆ ಎಲ್ಲವೂ ಆಗಿದ್ದಳು. ಅಷ್ಟೇ ಅಲ್ಲ, ಅಮೃತಾ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದರು. ಸದ್ಯ 4 ತಿಂಗಳ ಗರ್ಭಿಣಿ. ಸಮನ್ವಿ ಜತೆಗೆ ಮತ್ತೊಂದು ಮಗುವಿನ ತುಂಟಾಟ ನೋಡುತ್ತಾ ಖುಷಿಯಾಗಿ ಬದುಕು ನಡೆಸಬೇಕು ಎಂದು ಕನಸು ಕಂಡಿದ್ದ ತಾಯಿ ಒಡಲಿಗೆ ನಿನ್ನೆಯ ದುರಂತ ಕೊಳ್ಳಿ ಇಟ್ಟಿದೆ.

ಪ್ರೀತಿಯ ಮಗಳು ಅಮ್ಮನ ಕಣ್ಣೆದುರೇ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾಳೆ. ಹೆರಿಗೆ ಬಳಿಕ ಮೊದಲ ಮಗು, ಅಪಘಾತದಲ್ಲಿ 2ನೇ ಮಗುವಿನ ಸಾವು ಕುಟುಂಬಸ್ಥರನ್ನ ಕಂಗೆಡಿಸಿದೆ. ಇನ್ನು ಮಗಳನ್ನು ಕಳೆದುಕೊಂಡ ತಂದೆಯ ಗೋಳಾಟ ನೋಡಲಾಗ್ತಿಲ್ಲ. ಸಮನ್ವಿ ನೆನೆದು ಕಣ್ಣೀರಿಟ್ಟ ತಂದೆ

'ನನ್ನಮ್ಮ ಸೂಪರ್​ ಸ್ಟಾರ್​ ಶೋನಲ್ಲಿ ತುಂಟಾಟ, ನಗುಮುಖ, ಫಟಾಫಟ್​ ಮಾತಿನಿಂದಲೇ ಸಮನ್ವಿ ಪ್ರೇಕ್ಷಕರ ಮನಗೆದ್ದಿದ್ದಳು. ಬಾಳಿ ಬದುಕಬೇಕಿದ್ದ ಸಮನ್ವಿ ಚಿಕ್ಕ ವಯಸ್ಸಿಗೆ ದುರಂತ ಅಂತ್ಯಕಂಡದ್ದು ಅತ್ಯಂತ್ಯ ನೋವಿನ ಸಂಗತಿ.