ಮೈಸೂರಿನಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ: 9 ಆಡು ಮರಿಗಳ ಮೇಲೆ ದಾಳಿ

ಮೈಸೂರಿನಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ: 9 ಆಡು ಮರಿಗಳ ಮೇಲೆ ದಾಳಿ

ಮೈಸೂರು: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದೀಗ ಮೈಸೂರು ಜಿಲ್ಲೆಯಲ್ಲಿ ಬೀದಿ ನಾಯಿಗಳ ದಾಳಿ ಮುಂದುವರೆದಿದೆ.

ಇಂದು ಮುಂಜಾನೆ 9 ಆಡು ಮರಿಗಳ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.ಬೋಗಾದಿ 2ನೇ ಹಂತದ ಆಯುಷ್ ಬಡಾವಣೆಯಲ್ಲಿ ನಾಯಿ ದಾಳಿ ಮಾಡಿರುವ ಘಟನೆ ನಡೆದಿದೆ.ಒಂದೇ ಕುಟುಂಬಕ್ಕೆ ಸೇರಿದ್ದ ಒಂಬತ್ತು ಆಡು ಮರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.

ಕತ್ತಿನ ಭಾಗದಲ್ಲಿ ನಾಯಿಗಳು ಕಚ್ಚಿ ತಿಂದಿವೆ.

ಸ್ಥಳೀಯರಲ್ಲಿ ಚಿರತೆ ದಾಳಿ ಎಂದು ಆತಂಕ ಮೂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬೀದಿ ನಾಯಿಗಳ ಹಾವಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.