CT Ravi: ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ: ಯಾಕೆ ಗೊತ್ತಾ.?
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ತುಂಬಾನೇ ಹೆಸರು ಗಳಿಸಿ, ರಾಜ್ಯ ರಾಜಕೀಯದಲ್ಲಿ ರಾಜಕೀಯ ನಾಯಕರಿಗೆ ಟಾಂಗ್ ಕೊಡುತ್ತಾ, ಸುದ್ಧಿಯಾಗಿರುವಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ( CT Ravi ), ಇಂದು ಚಿಕ್ಕಮಗಳೂರಿನಲ್ಲಿ ಮನೆ ಮನೆಗೆ ತೆರಳಿ ಜೋಳಿಗೆ ಹಿಡಿದು ಭಿಕ್ಷೆ ಬೇಡಿದ್ದು ಕಂಡು ಬಂತು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವರು, ದತ್ತ ಮಾಲಾ ಉತ್ಸವದ ಅಂಗವಾಗಿ, ದತ್ತ ಮಾಲೆ ಧರಿಸಿ, ಭಕ್ತರೊಂದಿಗೆ ಚಿಕ್ಕಮಗಳೂರಿನ ನಾರಾಯಣಪುರ ಬಡಾವಣೆಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಜೋಳಿಗೆ ಒಡ್ಡಿ ಭಿಕ್ಷಾಟನೆ ನಡೆಸಿದರು.
ಅಂದಹಾಗೇ ಸಿಟಿ ರವಿ ಭಿಕ್ಷಾಟನೆ ಮಾಡಿದ್ದು ದತ್ತ ಮಾಲಾ ಉಸ್ತವದ ಅಂಗವಾಗಿ ಪಡಿ ಸಂಗ್ರಹಿಸೋದಕ್ಕೆ ಆಗಿದೆ. ದತ್ತಾತ್ರೆಯ ಸ್ವಾಮೀಜಿಗೆ ಪ್ರಿಯವಾದಂತ ಅಕ್ಕಿ, ಬೆಲ್ಲ ಮತ್ತು ಕಾಯಿಗಳನ್ನು ಭಿಕ್ಷೆ ಬೇಡಿ ಪಡಿಯಾಗಿ ಅವರು ಇಂದು ಸಂಗ್ರಹಿಸಿದರು.
ಅವರೊಂದಿಗೆ ದತ್ತಮಾಲಾಧಾರಿ ಇತರರರು ಜೊತೆಗೂಡಿ, ಮನೆ ಮನೆಗಳಿಗೆ ಭೇಟಿ ನೀಡಿ, ಅಕ್ಕಿ, ಬೆಲ್ಲ ಹಾಗೂ ಕಾಯಿಯನ್ನು ಭಿಕ್ಷೆಯಾಗಿ ಬೇಡಿ ಪಡೆದರು. ನಾಳೆ ಹೀಗೆ ಸಂಗ್ರಹಿಸಿರುವಂತ ಪಡಿಯನ್ನು ದತ್ತಪೀಠ, ಸೀತಾಳಯ್ಯನ ಗಿರಿ, ಫಲಹಾರ ಮಠ ಸೇರಿದಂತೆ ಯಾವುದಾದರೂ ಒಂದು ಮಠದಲ್ಲಿ ಸಲ್ಲಿಸಲಾಗುತ್ತದೆ.