ಮನಿ ಲಾಂಡರಿಂಗ್ ಕೇಸ್; ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಇಡಿ ಸಮನ್ಸ್

ಮನಿ ಲಾಂಡರಿಂಗ್ ಕೇಸ್; ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಇಡಿ ಸಮನ್ಸ್

ನವದೆಹಲಿ: ಡ್ರಗ್ಸ್ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ತೆಲುಗು ಚಿತ್ರರಂಗದ ಇತರ ಸದಸ್ಯರನ್ನ ಪ್ರಶ್ನಿಸಿದ್ದ ಏಜೆನ್ಸಿ ಇಂದು ನಟಿ ರಾಕುಲ್'ಗೆ ಸಮನ್ಸ್ ನೀಡಿದ್ದು, ಡಿಸೆಂಬರ್ 19ರಂದು ವಿಚಾರಣೆ ಹಾಜರಾಗುವಂತೆ ಸೂಚಿಸಿದೆ. ಅಂದ್ಹಾಗೆ, ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ರಾಕುಲ್ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.