ಮಗಳನ್ನು ಶಾಲೆಗೆ ಬಿಟ್ಟು ಕಚೇರಿಗೆ ಬಂದ ನೌಕರ ಆತ್ಮಹತ್ಯೆ

ಮಗಳನ್ನು ಶಾಲೆಗೆ ಬಿಟ್ಟು ಕಚೇರಿಗೆ ಬಂದ ನೌಕರ ಆತ್ಮಹತ್ಯೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಚೇರಿಯಲ್ಲಿ ಸಿಬ್ಬಂದಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರವಾರದ ಕೇಶವನಾಯ್ಕ ವಾಡ ನಿವಾಸಿ ಸತೀಶ್ ಪಾಂಡು ನಾಯ್ಕ(42) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸತೀಶ್ ಪಾಂಡುನಾಯ್ಕ ಕಾರ್ಯನಿರ್ವಹಿಸುತ್ತಿದ್ದರು.

ಶುಕ್ರವಾರ ಬೆಳಗ್ಗೆ ಮಗಳನ್ನು ಶಾಲೆಗೆ ಬಿಟ್ಟು ನೇರವಾಗಿ ಕಚೇರಿಗೆ ಬಂದ ಸತೀಶ್ ನಾಯ್ಕ್ ಕಚೇರಿಯ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.