ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಪ್ಪ ಅಂದರೆ, ಶಾಲೆಗೆ ಕೇಸರಿ ಬಣ್ಣ ಬಳಿತೀನಿ ಅಂತಾರೆ: ಬಿ.ಕೆ. ಹರಿಪ್ರಸಾದ್

ತುಮಕೂರು: ಬಿಜೆಪಿಗೆ ಸುಳ್ಳುವುದೇ ಕೆಲಸವಾಗಿದೆ. ನಿಮ್ಮ ಜಿಲ್ಲೆಯ ಮಂತ್ರಿ ಮಾಧುಸ್ವಾಮಿ ಅವರು ಆಗಾಗ ನಿಜ ಹೇಳುತ್ತಾ ಇರುತ್ತಾರೆ. ಸರ್ಕಾರ ನಡೆಸೋಕೆ ಆಗುತ್ತಿಲ್ಲ ಅಂತಾ ನೋವಿನಿಂದ ಹೇಳುತ್ತಾರೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.ಬೇಕಿದ್ರೆ ನಿನ್ನ ಮುಖಕ್ಕೆ ಬಳಿಕೊಳಪ್ಪ ಕೇಸರಿ ಬಣ್ಣ. ಈ ಅಯೋಗ್ಯ ಶಿಕ್ಷಣ ಮಂತ್ರಿಗೆ ಸ್ವಲ್ಪ ಕೂಡ ಜ್ಞಾನ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಸರ್ಕಾರಿ ಶಾಲೆಯನ್ನ ಕಟ್ಟಿಸುವಾಗ ಕೇವಲ ಒಂದು ಧರ್ಮದವರು ಕೊಟ್ಟ ತೆರಿಗೆಯಿಂದ ಕಟ್ಟಿಸಿಲ್ಲ. ಎಲ್ಲಾ ಧರ್ಮದವರು ಕೊಟ್ಟಿರೋ ತೆರಿಗೆಯಿಂದ ಶಾಲೆ ಕಟ್ಟಿಸಿದ್ದಾರೆ. ಯಾವ ಅವಧಿಯಲ್ಲಿಯೂ ಶಿಕ್ಷಣ ಇಲಾಖೆಯಲ್ಲಿ ನಡೆಯದಷ್ಟು ಭ್ರಷ್ಟಾಚಾರ ಈ ಬಾರಿ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ನಡೆಸೋಕೆ ಆಗುತ್ತಿಲ್ಲ ಅಂದರೆ ಮತ್ಯಾಕೆ ಇದ್ದೀರಿ ಸಿಎಂ ಬಸವರಾಜ ಬೊಮ್ಮಾಯಿಯವರೇ? ದಯವಿಟ್ಟು ಬಿಟ್ಟು ಹೋಗಿ ಎಂದರು. ನಿಮ್ಮ ಜಿಲ್ಲೆಯ ಇನ್ನೊಬ್ಬ ಮಂತ್ರಿ, ಶಿಕ್ಷಣ ಮಂತ್ರಿ. ಅದೇನ್ ಶಿಕ್ಷಣ ಪಡೆದಿದ್ದಾನೋ ಅವನಿಗೆ ಗೊತ್ತಿಲ್ಲ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಪ್ಪ ಅಂದರೆ, ಶಾಲೆಗೆ ಕೇಸರಿ ಬಣ್ಣ ಬಳಿತೀನಿ ಅಂತಾ ಹೊರಟಿದ್ದಾನೆ.