ಭೀಕರ ಚಳಿಗೆ ಮಂಜುಗಡ್ಡೆಯಾದ ವಿಶ್ವವಿಖ್ಯಾತ ನಯಾಗರ ಜಲಪಾತ: ಭೀತಿ ಸೃಷ್ಟಿಸುವ ಫೋಟೊಗಳು!

ಭೀಕರ ಚಳಿಗಾಳಿಯಿಂದ ಅಮೆರಿಕ ತತ್ತರಿಸಿದ್ದು, ವಿಶ್ವವಿಖ್ಯಾತ ನಯಾಗರ ಜಲಪಾತ ಕೂಡ ಥಂಡಾ ಹೊಡೆದಿದೆ. ಪ್ರವಾಸಿಗರೂ ಕಾಲಿಡಲೂ ಬೆಚ್ಚುತ್ತಿದ್ದಾರೆ.
ಹೌದು, ಇತಿಹಾಸದ ಪ್ರಕಾರ 12 ಸಾವಿರ ವರ್ಷಗಳ ಹಿಂದೆ ಜನಿಸಿದ ನಯಾಗರ ಜಲಪಾತ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಚಳಿಯಿಂದ ತನ್ನ ನಯನ ಮನೋಹರ ಸೌಂದರ್ಯವನ್ನು ಕಳೆದುಕೊಂಡು ಭೀಕರವಾಗಿ ಕಾಣುತ್ತಿದೆ
ಅಮೆರಿಕದಲ್ಲಿ ಇದುವರೆಗೆ ಚಳಿಗೆ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೆ, ವಿದ್ಯುತ್ ಪೂರೈಕೆ ಕಡಿತದಿಂದ ಜನರು ಬೆಚ್ಚಗಿನ ಪ್ರದೇಶ ಸೃಷ್ಟಿಸಿಕೊಳ್ಳಲು ಆಗದೇ ಪರದಾಡುತ್ತಿದ್ದಾರೆ. ವಾಹನಗಳು ಅಪಘಾತಕ್ಕೀಡಾಗಿ ಎಲ್ಲೆಂದರಲ್ಲೇ ದಾರಿಯಲ್ಲಿ ಕೆಟ್ಟು ನಿಂತಿವೆ.
ವಿಶ್ವದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿರುವ ನಯಾಗರ ಕೆನಡಾದ ಒರಾಂಟಿಯೊ ಮತ್ತು ಅಮೆರಿಕದ ನ್ಯೂಯಾರ್ಕ್ ಗಡಿಯಲ್ಲಿದೆ.
ಜಲಪಾತದಲ್ಲಿ ನೀರು ಧುಮ್ಮಿಕ್ಕುವ ಬದಲು ಮಂಜುಗಡ್ಡೆಗಳು ಉರುಳುತ್ತಿವೆ. ಪ್ರವಾಸಿಗರು ಭೇಟಿ ನೀಡುವ ಜಾಗದಲ್ಲಿ ನಿಲ್ಲಲು ಆಗದಂತಹ ಪರಿಸ್ಥಿತಿ ಇದೆ. ಅಧಿಕಾರಿಗಳ ಪ್ರಕಾರ ಪ್ರತಿ ಸೆಕೆಂಡ್ ಗೆ 3160 ಟನ್ ನೀರು ಧುಮ್ಮಿಕ್ಕಿದರೆ, ಪ್ರತಿ ಸೆಕೆಂಡ್ ಗೆ 32 ಅಡಿ ಬೀಳುತ್ತಿತ್ತು. ಈ ಹಿಂದಿಗಿಂತಲೂ 5 ಪಟ್ಟು ಹೆಚ್ಚು ಮಂಜುಗಡ್ಡೆಯಾಗುತ್ತಿದೆ.