ಭಿಕ್ಷುಕನ ವೇಷ ಹಾಕಿ ಪತ್ನಿಯನ್ನು ಸಾರ್ವಜನಿಕವಾಗಿ ಮುಗಿಸಲು ಪ್ರಯತ್ನಿಸಿದ ಕಾಲೇಜು ಪ್ರಾಧ್ಯಾಪಕ ಅರೆಸ್ಟ್

ಚೆನ್ನೈ: ಪತ್ನಿಯ ಶೀಲ ಶಂಕಿಸಿದ 58 ವರ್ಷದ ಕಾಲೇಜು ಪ್ರಾಧ್ಯಾಪಕನೊಬ್ಬ ತನ್ನ ಹೆಂಡತಿಯನ್ನು ಸಾರ್ವಜನಿಕವಾಗಿ ಕೊಲೆ ಮಾಡಲು ಪ್ರಯತ್ನಿಸಿದ್ದ ಆರೋಪದ ಮೇಲೆ ಕಾಲೇಜು ಶಿಕ್ಷಕನನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ.
ನಂದನಂ ಕಲಾ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ ಕುಮಾರಸ್ವಾಮಿ ಗುರುವಾರ ಸಂಜೆ ಎಗ್ಮೋರ್‌ಆಂಗ್ಲೋ-ಇಂಡಿಯನ್ ಕ್ವಾರ್ಟರ್ಸ್ ರಸ್ತೆಯಲ್ಲಿ ಬಸ್‌ನಿಂದ ಇಳಿಯುತ್ತಿದ್ದಂತೆ ಪತ್ನಿ ಜಯವಾಣಿ (38) ಅವರನ್ನು ಬ್ಲೇಡ್‌ನಿಂದ ಕೊಯ್ಯಲು ಯತ್ನಿಸಿದ್ದಾನೆ.
ಆಘಾತಕ್ಕೊಳಗಾದ ಸಾರ್ವಜನಿಕರು ಜಾಗೃತರಾಗುತ್ತಿದ್ದಂತೆ, ದಾಳಿಕೋರ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಖಾಸಗಿ ಇಂಜಿನಿಯರಿಂಗ್ ಕಾಲೇಜು ಉದ್ಯೋಗಿ ಜಯವಾಣಿ ಪೊಲೀಸರಿಗೆ ಭಿಕ್ಷುಕನ ವೇಷದಲ್ಲಿ ಬಂದಿದ್ದ ತನ್ನ ಪತಿ ಹಲ್ಲೆ ನಡೆಸಿದ್ದು ಎಂದು ಮಾಹಿತಿ ನೀಡಿದ್ದಾರೆ.
ಪತಿ ಕುಮಾರಸ್ವಾಮಿ ಅವರನ್ನು ಶುಕ್ರವಾರ ಎಗ್ಮೋರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಪತ್ನಿಯ ಶೀಲದ ಬಗ್ಗೆ ಅನುಮಾನವಿದ್ದುದರಿಂದ ಆತನನ್ನು ಕೊಲ್ಲಲು ಬಯಸಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಹೆಂಡತಿಗೆ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ವ್ಯಕ್ತಿ ಅನುಮಾನಿಸಿದ್ದ. ದಂಪತಿಗಳ ನಡುವಿನ ವಯಸ್ಸಿನ ವ್ಯತ್ಯಾಸದಿಂದಾಗಿ ಪತಿಯಲ್ಲಿ ಅನುಮಾನ ಮೂಡಲು ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಯವಾಣಿ ಮದುವೆಯಾದಾಗ ಇನ್ನೂ ವಿದ್ಯಾರ್ಥಿನಿಯಾಗಿದ್ದಳು. ಕುಮಾರಸ್ವಾಮಿ ಆಕೆಯ ತಂದೆಯ ಕುಟುಂಬ ಸ್ನೇಹಿತನಾಗಿದ್ದರಿಂದ ಜಯವಾಣಿ ಅವರ ಶಿಕ್ಷಣದ ವೆಚ್ಚವನ್ನು ನೋಡಿಕೊಂಡರು. ಇತ್ತೀಚೆಗೆ, ಮಹಿಳೆ ತುಂಬಾ ಚಿಕ್ಕವಳಾದ ಕಾರಣ ಕುಮಾರಸ್ವಾಮಿ ಅವರ ನಿಷ್ಠೆಯನ್ನು ಅನುಮಾನಿಸಲು ಪ್ರಾರಂಭಿಸಿದರು' ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)