ಭಾರತಕ್ಕೆ 188 ರನ್​ಗಳ ಭರ್ಜರಿ ಜಯ

ಭಾರತಕ್ಕೆ 188 ರನ್​ಗಳ ಭರ್ಜರಿ ಜಯ

ಛತ್ತೋಗ್ರಾಮ್​ನ ಝಹೂರ್‌ ಅಹ್ಮದ್‌ ಚೌಧುರಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಅಮೋಘ ಪ್ರದರ್ಶನ ತೋರಿದ ರಾಹುಲ್ ಪಡೆ 188 ರನ್​ಗಳ ಜಯ ಸಾಧಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. 2ನೇ ಇನ್ನಿಂಗ್ಸ್​ನಲ್ಲಿ 258 ರನ್​ಗೆ ಡಿಕ್ಲೇರ್ ಘೋಷಿಸಿ ಬಾಂಗ್ಲಾಕ್ಕೆ ಗೆಲ್ಲಲು 513 ರನ್​ಗಳ ಬಿಗ್ ಟಾರ್ಗೆಟ್ ನೀಡಿದ್ದ ಟೀಮ್ ಇಂಡಿಯಾ ಜಯಿಸಿದೆ.