ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ; ನ.1 ರಂದು ಕರಾಳ ದಿನ ಆಚರಿಸಲು ಸಿದ್ಧತೆ
ಬೆಳಗಾವಿ: ಕನ್ನಡ ರಾಜ್ಯೋತ್ಸವ ಹತ್ರ ಬರುತ್ತಿದೆ. ರಾಜ್ಯೋತ್ಸವ ಆಚರಣೆಗಾಗಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೋಟಿ ಕಂಠ ಗಾಯನಕ್ಕೆ ಚಾಲನೆ ನೀಡಲಾಗಿತ್ತು. ಈ ನಡುವೆಯೇ ಎಂಇಎಸ್ ಮತ್ತೆ ಪುಂಡಾಟ ಮೆರೆಯಲು ಸಿದ್ಧತೆ ಮಾಡಿಕೊಂಡಿದೆ.ಹೌದು ಕನ್ನಡ ರಾಜ್ಯೋತ್ಸವ ದಂದು ಕರಾಳ ದಿನ ಆಚರಿಸಲು ಎಂಇಎಸ್ ತಯಾರಿ ನಡೆಸಿದೆ. ನಾಡದ್ರೋಹಿ ಎಂಇಎಸ್ ಗೆ ಉದ್ಧವ್ ಠಾಕ್ರೆ ಬಣ ಬೆಂಲ ಸೂಚಿಸಲಿದೆ. ಹೀಗಾಗಿ ನಿನ್ನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಉದ್ಧವ್ ಠಾಕ್ರೆ ಬಣ ಸಭೆ ಸೇರಿತ್ತು. ಕೊಲ್ಹಪುರದ ಶಿವಸೇನ ಜಿಲ್ಲಾಧ್ಯಕ್ಷ ದೇವಣೆ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ವಬೆಳಗಾವಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು. ಮೀಟಿಂಗ್ ನಡೆದ ಬಳಿಕ ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಮೆರೆದಿದ್ದಾರೆ. ಅ. 31ರಂದು ಶಿವಸೇನೆಯ ಎಲ್ಲಾ ಪದಾಧಿಕಾರಿಗಳು ಸೇರುತ್ತೇವೆ. ನವೆಂಬರ್ 1 ರಂದು ಕರಾಳ ದಿನ ವೇಳೆ ಎಲ್ಲರೂ ಭಾಗಿಯಾಗುತ್ತೇವೆ ಚೆಕ್ ಪೋಸ್ಟ್ ನಲ್ಲಿ ತಡೆದ್ರೆ ಶಿನೋಳಿ ಮಾರ್ಗವಾಗಿ ಬೆಳಗಾವಿಗೆ ಭೇಟಿ ನೀಡುತ್ತೇವೆ ಎಂದು ಕೊಲ್ಹಪುರದಲ್ಲಿ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಹೇಳಿದ್ದಾರೆ.