ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್'ನಿಂದ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್'ನಿಂದ ಪ್ರತಿಭಟನೆ

ಹುಬ್ಬಳ್ಳಿ : ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನದ ಭಾಗವಾಗಿ ಸಿಲಿಂಡರ್, ಸ್ಕೂಟರ್, ಬೈಕ್ ಗಳಿಗೆ ಹೂವಿನ ಹಾರ ಹಾಕಿ, ಹಲಗಿ ಬಾರಿಸುವ ಮೂಲಕ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆಯನ್ನು ಹುಬ್ಬಳ್ಳಿಯ ಗೋಪನಕೊಪ್ಪ ವೃತ್ತದಲ್ಲಿಂದು ನಡೆಸಲಾಯಿತು.

ವಿದ್ಯಾನಗರ ಮತ್ತು ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯುಕ್ತಾಶ್ರಯದಲ್ಲಿ  ವಿನೂತನ ಪ್ರತಿಭಟನೆ ನಡೆಸಿದ ಕಾಂಗ್ರೆಸಿಗರು,  ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತರೂಢ ಬಿಜೆಪಿ ಸರ್ಕಾರದ ದುಬಾರಿ ಆಡಳಿತದಿಂದ  ಜನರು ರೋಸಿ ಹೋಗಿದ್ದು,  ಜನಸಾಮಾನ್ಯರನ್ನು  ಸಂಕಷ್ಟಕ್ಕೀಡು ಮಾಡುವಂತ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯಿಂದ ಬೆಂದು ಹೋಗಿರುವ ಜನತೆ ಬದಲಾವಣೆ ಬಯಸುತ್ತಿದೆ‌. ಬಿಜೆಪಿ ಸರ್ಕಾರ ಬರೀ ತೆರಗೆ ವಸೂಲಿ ಮಾಡುತ್ತಿದ್ದಾರೆಯೇ ಹೊರತು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ  ಸುವರ್ಣ ಕಲಕುಂಟ್ಲಾ, ಪ್ರಕಾಶ ಕುರಹಟ್ಟಿ,  ಪ್ರಕಾಶ ಕ್ಯಾರಕಟ್ಟಿ, ಸಂದೀಲ್ ಕುಮಾರ್,  ಮಹಮ್ಮದ್ ಶರೀಫ ಗರಗದ, ದೀಪಾ ಗೌರಿ, ಬಂಗಾರೇಶ ಹಿರೇಮಠ,  ಶಾಕೀರ್ ಸನದಿ, ಅಶೋಕ ಕಲಾದಗಿ, ಬಸವರಾಜ ತಮ್ಮಣ್ಣವರ, ವೀರಣ್ಣ ಹಿರೇಹಾಳ, ಫೀರಾಜಿ ಖಂಡೇಕರ್, ಹೂವಪ್ಪ ದಾಯದೋಡಿ,  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.