ಬೆಂಗ್ಳೂರಲ್ಲಿ ʻಅಕ್ರಮ ಸಂಬಂಧ ಶಂಕಿಸಿʼ, ಪತಿಯಿಂದಲೇ ʼಪತ್ನಿಯ ಬರ್ಬರ ಹತ್ಯೆ

ಬೆಂಗ್ಳೂರಲ್ಲಿ ʻಅಕ್ರಮ ಸಂಬಂಧ ಶಂಕಿಸಿʼ, ಪತಿಯಿಂದಲೇ ʼಪತ್ನಿಯ ಬರ್ಬರ ಹತ್ಯೆ

ಬೆಂಗಳೂರು : ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧ ಶಂಕಿಸಿ ಪತಿಯಿಂದಲೇ ಪತ್ನಿಯನ್ನೇ ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.

ಶೇಕ್ ಸೊಹೇಲ್ ಜೊತೆ 14 ವರ್ಷಗಳ ಹಿಂದೆ ಮದುವೆಯಾಗಿದ್ದ ತಬ್ಸಿಮ್ ಬೇಬಿಯೂ ಬೆಂಗಳೂರಿನಲ್ಲಿ ಪ್ರಿಯಕರ ನಯೀಮ್​ ಎಂಬಾನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು.

ಅಕ್ರಮ ಸಂಬಂಧ ತಿಳಿದು ಪತ್ನಿಯನ್ನುಶೇಕ್ ಸೊಹೇಲ್ ಕೋಲ್ಕತ್ತಾಗೆ ಕರೆದುಕೊಂಡು ಹೋದನು. ಆದ್ರೆ ತಬ್ಸಿಮ್ ಬೇಬಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಮತ್ತೆ ಬಂದು ಸಂಬಂಧ ಮುಂದುವರಿಸಿದಳು ಇದನ್ನು ಮನಗಂಡ ಶೇಕ್ ಸೊಹೇಲ್ ನಿನ್ನೆರಾತ್ರಿ ಮಾತನಾಡಬೇಕೆಂದು ತಬ್ಸಿಮ್ ಬೇಬಿಯನ್ನ ಭೇಟಿಯಾಗಿದ್ದನು. ​ಈ ವೇಳೆ ಮಾತಿಗೆ ಮಾತು ಬೆಳೆದು ತಬ್ಸಿಮ್ ಬೇಬಿಯನ್ನ ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆಗೈದಿದ್ದಾನೆ.

ಗಲಾಟೆ ತೀವ್ರಗೊಂಡು ತಬ್ಸಿಮ್ ಬೇಬಿ ಹಾಗೂ ಪ್ರಿಯಕರ ನಯೀಮ್​ಗೆ ಸೇರಿದ ಎರಡೂವರೆ ವರ್ಷದ ಮಗುವಿಗೂ ಗಾಯಗೊಂಡಿದ್ದು, ಸದ್ಯ ಆರೋಪಿ ಸೊಹೇಲ್​ನನ್ನು ಹೆಣ್ಣೂರು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.