ಬೆಂಗಳೂರು ಪೊಲೀಸರಿಗೆ ಕೊರೊನಾ ಶಾಕ್; ಒಂದೇ ಠಾಣೆಯ 14 ಸಿಬ್ಬಂದಿಗೆ ಸೋಂಕು ದೃಢ

ಬೆಂಗಳೂರು ಪೊಲೀಸರಿಗೆ ಕೊರೊನಾ ಶಾಕ್; ಒಂದೇ ಠಾಣೆಯ 14 ಸಿಬ್ಬಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮತ್ತೆ ಕೊರೊನಾ ಹಾಟ್ ಸ್ಪಾಟ್ ಆಗುತ್ತಿದ್ದು, ಇದೀಗ ಪೊಲೀಸ್ ಠಾಣೆಗಳಿಗೂ ಹೆಮ್ಮಾರಿ ವಕ್ಕರಿಸಿದೆ. ಸಿಟಿ ಮಾರ್ಕೆಟ್ ಠಾಣೆಯ 14 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಾರಿಯರ್ಸ್ ಎಂದೇ ಹೇಳಲಾಗುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೂ ಒಮಿಕ್ರಾನ್ ಭೀತಿ ಎದುರಾಗಿದ್ದು, ಸಿಲಿಕಾನ್ ಸಿಟಿಯ ಆರಕ್ಷಕರಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ.

ಸಿಟಿ ಮಾರ್ಕೆಟ್ ಠಾಣೆಯ ಒಟ್ಟು 14 ಸಿಬ್ಬಂದಿಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ.

ಆಂಟಿಜನ್ ಟೆಸ್ಟ್ ವೇಳೆ ಸೋಂಕು ದೃಢಪಟ್ತಿದ್ದು, ಸೋಂಕಿತ ಸಿಬ್ಬಂದಿಗಳನ್ನು ಐಸೋಲೇಷನ್ ಗೊಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.