ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಬವಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಗೂಗಲ್ ಉದ್ಯೋಗಿ
ಕೆಲಸ ಮೇಲೆ ನೀವು ಬೇರೆ ಊರಿಗೆ ಹೋಗಿದ್ದಲ್ಲಿ ಅಲ್ಲಿ ಹೊಸ ಮನೆ ಕಂಡುಕೊಳ್ಳುವುದೇ ಒಂದು ದೊಡ್ಡ ಸವಾಲು. ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆ ಹುಡುಕಲು ತಾನು ಪಟ್ಟ ಪಾಡನ್ನು ಟೆಕ್ಕಿಯೊಬ್ಬ ಹೀಗೊಂದು ರೀತಿಯಲ್ಲಿ ವಿವರಿಸಿದ್ದಾನೆ.
ಬ್ರೋಕರ್ನೊಂದಿಗೆ ಚೌಕಾಸಿ, ಪ್ಯಾಕಿಂಗ್, ಸ್ಥಳಾಂತರವಾಗುವುದು ಸೇರಿದಂತೆ ಅನೇಕ ಕಾಠಿಣ್ಯಗಳನ್ನು ಎದುರಿಸುವ ಹೊಸಬರ ಪಾಡನ್ನು ಮಾತುಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಈ ಟೆಕ್ಕಿ.
"ನಾನು ನನ್ನ ಮೊಟ್ಟ ಮೊದಲ ಬಾಡಿಗೆದಾರರ ಸಂದರ್ಶನದಲ್ಲಿ ಕೆಟ್ಟದಾಗಿ ವೈಫಲ್ಯ ಅನುಭವಿಸಿದೆ. ಗೂಗಲ್ಗಿಂತಲೂ ಕಷ್ಟವಾದ ಸಂದರ್ಶನಗಳನ್ನು ಕ್ಲಿಯರ್ ಮಾಡುವುದು ಜೀವನದಲ್ಲಿ ಬಹಳಷ್ಟು ಇವೆ ಎಂದು ಅರಿವು ಮೂಡಿಸಿದ ಘಳಿಗೆ ಇದಾಗಿದೆ," ಎಂದು ರಿಪು ದಮನ್ ಭದೋರಿಯಾ ಶೇರ್ ಮಾಡಿಕೊಂಡಿದ್ದಾರೆ.
"ಪ್ರತಿ ಬಾರಿ ವೈಫಲ್ಯ ಕಂಡಾಗಲೂ ಸುಧಾರಣೆ ಕಾಣಲು ಬಯಸುವ ನಾನು, ಎಂದಿನಂತೆ ಈ ಬಾರಿಯೂ ಮಾಡಿದೆ. ಸಂದರ್ಶನದಲ್ಲಿ ನನ್ನಿಂದ ಏನಾದರೂ ತಪ್ಪುಗಳಾಗಿದ್ದರೆ ದಯವಿಟ್ಟು ತಿಳಿಸಿ ಎಂದು ಮನೆಯ ಮಾಲೀಕರಿಗೆ ನೇರವಾಗಿ ಕೇಳಿದೆ. ಏಕೆಂದರೆ ಈ ಪ್ರಕರಣದಲ್ಲಿ ಸಂದರ್ಶನದ ವೈಫಲ್ಯದ ಕುರಿತು ಫೀಡ್ಬ್ಯಾಕ್ ಕೊಡಲು ಎಚ್ಆರ್ ಅಥವಾ ನೇಮಕಾತಿದಾರರು ಇಲ್ಲವಲ್ಲ," ಎಂದು ವಿನೋದಮಯವಾಗಿ ಹಂಚಿಕೊಂಡಿದ್ದಾರೆ ಈ ಟೆಕ್ಕಿ.
ಮುಂದಿನ 'ಸಂದರ್ಶನಗಳಿಗೆ' ತಮ್ಮ ಸಿದ್ಧತೆಗಳ ಕುರಿತು ಮಾತನಾಡಿದ ಭದೋರಿಯಾ, "ಗೂಗಲ್ಗೆ ಕೆಲಸ ಮಾಡುವ ನಾನು ಅವರ ಮನೆಯನ್ನೇ ಖರೀದಿ ಮಾಡುವ ಸಾಧ್ಯತೆ ಇದೆ ಎಂದು ಹೇಳುವಾಗ ಮನೆಯ ಮಾಲೀಕರು ತಮ್ಮ ಫೀಡ್ಬ್ಯಾಕ್ನಲ್ಲಿ ಪಾರದರ್ಶಕತೆ ತೋರಿದಂತೆ ಕಂಡು ಬಂತು. ಗೂಗಲ್ನಲ್ಲಿ ಕೆಲಸ ಮಾಡುವುದು ಈ ಮಟ್ಟದಲ್ಲಿ ಹಿನ್ನಡೆ ತರಬಲ್ಲದು ಎಂದು ನಾನು ಎಂದೂ ಭಾವಿಸಿರಲಿಲ್ಲ," ಎಂದಿದ್ದಾರೆ.
ಈ ಫೀಡ್ಬ್ಯಾಕ್ನಿಂದ ತಾವು ಮುಂದಿನ ಬಾರಿಯ ಬಾಡಿಗೆದಾರರ ಸಂದರ್ಶನದಲ್ಲಿ ಪಾಸಾಗಿದ್ದಾಗಿ ಹೇಳಿಕೊಳ್ಳುವ ಭದೋರಿಯಾ, "ಬಾಡಿಗೆದಾರರ ರಿವ್ಯೂ ಅನುಭವಕ್ಕಾಗಿ ನನ್ನನ್ನು ಸಂಪರ್ಕಿಸಲು ಹಿಂಜರಿಕೆ ಬೇಡ," ಎಂದಿದ್ದಾರೆ.