ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯಿಂದ 10ಕ್ಕೂ ಹೆಚ್ಚು ಬಾರಿ ಪ್ರೇಯಸಿ ಇರಿದು ಹತ್ಯೆ

ಬೆಂಗಳೂರು: ಪ್ರೇಯಸಿಯೊಂದಿಗೆ ಮನಸ್ಥಾಪಗೊಂಡಂತ ಭಗ್ನ ಪ್ರೇಮಿಯೊಬ್ಬ, ಪ್ರೇಯಸಿಯನ್ನು 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಬರ್ಭರವಾಗಿ ಹತ್ಯೆಗೈದಿರೋ ಘಟನೆ ಜೀವನ್ ಭೀಮಾ ನಗರದ ಬಳಿಯ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ವೇಳೆಯಲ್ಲಿ ಮುರುಗೇಶ್ ಪಾಳ್ಯದಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಂತ ಲೀಲಾ ಪವಿತ್ರಾ (25) ಎಂಬಾಕೆಯ ಬಳಿ ಪಾಗಲ್ ಪ್ರೇಮಿ ಆರೋಪಿ ದಿನಕರ್ ತೆರಳಿದ್ದಾನೆ. ತನ್ನನ್ನು ಮದುವೆಯಾಗುವಂತೆ ಬೇಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ದಿನಕರ್ ತಾನು ತೆಗೆದುಕೊಂಡು ಹೋಗಿದ್ದಂತ ಚಾಕುವಿನಿಂದ ಲೀಲಾ ಪವಿತ್ರಗ್ಗೆ ಹತ್ತಕ್ಕೂ ಹೆಚ್ಚುಬಾರಿ ಇರಿದು ಕೊಲೆ ಗೈದಿದ್ದಾನೆ.
ಯುವತಿಯನ್ನು ಕೊಲೆಗೈದ ಪಾಗಲ್ ಪ್ರೇಮಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ದಿನಕ್ ಆಂಧ್ರಪ್ರದೇಶದ ಮೂಲದವನು ಎಂದು ತಿಳಿದು ಬಂದಿದೆ. ಪವಿತ್ರ ಹಾಗೂ ದಿನಕರ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದ್ರೇ ಇತ್ತೀಚಿಗೆ ಪೋಷಕರ ಸೂಚನೆಯ ಕಾರಣ ದಿನಕರ್ ನನ್ನು ಯುವತಿ ಅವೈಡ್ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ.
ಇದಷ್ಟೇ ಅಲ್ಲದೇ ದಿನಕರ್ ಮದುವೆಯಾಗಲು ಪೋಷಕರು, ಯುವತಿಯೂ ಒಪ್ಪಿಗೆ ನಿರಾಕರಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿಯೇ ದಿನಕರ್ ಹಾಗೂ ಪವಿತ್ರಾ ನಡುವೆ ಜಗಳ ಕೂಡ ನಡೆದು, ನಿನ್ನೆ ರಾತ್ರಿ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಹೇಳಲಾಗುತ್ತಿದೆ.