ಬೆಂಗಳೂರಿನಲ್ಲಿ ಅಳಿಯನಿಂದಲೇ ಅತ್ತೆಯ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ಅಳಿಯನಿಂದಲೇ ಅತ್ತೆಯ ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಘೋರ ದುರಂತ ನಡೆದಿದೆ. ನಗರದಲ್ಲಿ ಅಳಿಯನಿಂದಲೇ ಅತ್ತೆಯ ಬರ್ಬರ ಹತ್ಯೆ ನಡೆದಿದೆ.

ಬೆಂಗಳೂರಿನಲ್ಲಿ ಕೆಂಗೇರಿ ಬಳಿಯ ಬೃಂದಾವನ ಲೇಔಟ್‌ ನಲ್ಲಿ ಘಟನೆ ನಡೆದಿದೆ. 48 ವರ್ಷದ ಏಳಲ್‌ ಅರಸಿ ಹತ್ಯೆಯಾಗಿರುವ ವ್ಯಕ್ತಿ.

ದಿವಾಕರ್‌ ಎಂಬಾತ ಚಾಕುವಿನಿಂದ ಇರಿದು ಏಳಲ್‌ ಅರಸಿ ಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆಯಲ್ಲಿ ವಿನೋದ್‌ ಕುಮಾರ್‌ ಎಂಬುವವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ʼಆದರೆ ಈ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.ಪೊಲೀಸರು ತನಿಖೆ ನಂತರ ಸತ್ಯಾಂಶಗಳು ಹೊರಗೆ ಬರಲಿದೆ. ಈ ಸಂಬಂಧ ಕೆಂಗೇರಿ ಪೊಲೀಸರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.