ಬೀದರ್ನಲ್ಲಿ JDS ಪಕ್ಷದ ಶಾಲು ಸುಟ್ಟು ಹಾಕಿದ್ದು,BJP ಕಾರ್ಯಕರ್ತರ ಪೂರ್ವ ನಿಯೋಜಿತ ಕೃತ್ಯ : ಜೈಸಿಂಗ್ ರಾಠೋಡ್ ಆರೋಪ
ಬೀದರ್ : ಮುಂದಿನ ವಿಧಾನ ಸಭೆ ಚುನಾವಣೆ ರಾಜ್ಯದೆಲ್ಲೆಡೆ ರಣತಂತ್ರ ರೂಪಿಸುತ್ತಿದ್ದು, ಇದೀಗ ಪ್ರತಿ ಜಿಲ್ಲೆಯಲ್ಲೂ ಮತದಾರ ಸೆಳೆಯೋದಕ್ಕೆ ರಾಜಕೀಯ ಮುಖಂಡರು ಮುಂದಾಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ಭಾಗದಲ್ಲಿ ಜೆಡಿಎಸ್ ಪಕ್ಷ ಶಾಲನ್ನು ಸುಟ್ಟು ಹಾಕಿ ಕಿಡಿಕಾರಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಸಂಬಂಧಿಸಿ, ಇಂದು ಔರಾದ್ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಜೈಸಿಂಗ್ ರಾಠೋಡ್ ಸುದ್ದಿ ಗೋಷ್ಟಿ ಮಾಡಿ ಗಂಭೀರ ಆರೋಪ ಮಾಡಿದಲ್ಲದೇ, ಔರಾದ್ ಕ್ಷೇತ್ರದಲ್ಲಿ ಪಂಚರತ್ನ ಯೋಜನೆ ಜಾಗೃತಿ ಮೂಡಿಸಲುಮಾಳೆಗಾಂವ್ ತಾಂಡಕ್ಕೆ ಹೋದಾಗ ಪ್ರಭು ಚವ್ಹಾಣ್ ಬೆಂಬಲಿಗರು ಮೋದಿ ಮೋದಿ ಎಂದು ಕೂಗಿದ್ದಾರೆ . ನಾವು ಅಲ್ಲಿಂದ ತೆರಳಿದ ತಕ್ಷಣ ಬಿಜೆಪಿಕಾರ್ಯಕರ್ತರು ಜೆಡಿಎಸ್ ಪಕ್ಷದ ಶಾಲುಗಳನ್ನು ಸುಟ್ಟು ಹಾಕಿದ್ದಾರೆ ಈ ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ . ಈ ಘಟನೆಯೂ ಇದು ಪೂರ್ವ ನಿಯೋಜಿತ ಕೃತ್ಯ ಎಂದು ಜೈಸಿಂಗ್ ರಾಠೋಡ್ ಕೆಂಡಾಮಂಡಲಾಗಿದ್ದಾರೆ.