ಬಿಗ್ ಬಾಸ್ ಗೆಲುವಿಗೆ ಕೊರಗಜ್ಜನೇ ಕಾರಣ: ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ತಾಯ್ನಾಡು ಮಂಗಳೂರಿಗೆ ಕಾಲಿಟ್ಟಿರುವ ರೂಪೇಶ್, ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ್ದು, ತಮ್ಮ ಗೆಲುವನ್ನು ಕೊರಗಜ್ಜ ದೈವಕ್ಕೆ ಸಮರ್ಪಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಕೊರಗಜ್ಜ ದೈವವನ್ನು ತುಂಬಾ ಆರಾಧನೆ ಮಾಡುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವಾಗ ಕೊರಗಜ್ಜನ ಹೆಸರು ಹೇಳುತ್ತಿದ್ದೆ. ಬಿಗ್‌ಬಾಸ್‌ನಲ್ಲಿ ಕೊರಗಜ್ಜನೇ ನನ್ನನ್ನು ಗೆಲ್ಲಿಸಿದ್ದಾರೆ ಎಂದಿದ್ದಾರೆ.