ಬಾಲಿವುಡ್ ಸಿನಿಮಾ ಕಾಪಿ ಮಾಡುವುದನ್ನು ಮೊದಲು ಬಿಡಿ; ಪಾಕ್ ಪ್ರಧಾನಿ ಇಮ್ರಾನ್ ಖಾನ್

ಬಾಲಿವುಡ್ ಸಿನಿಮಾ ಕಾಪಿ ಮಾಡುವುದನ್ನು ಮೊದಲು ಬಿಡಿ; ಪಾಕ್ ಪ್ರಧಾನಿ ಇಮ್ರಾನ್ ಖಾನ್

ಬಾಲಿವುಡ್ ಸಿನಿಮಾಗಳನ್ನು ನಕಲು ಮಾಡುವುದನ್ನು ಮೊದಲು ಬಿಡಿ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಸಿನಿಮಾ ನಿರ್ಮಾಪಕರಿಗೆ ಹೇಳಿದ್ದಾರೆ. ಮೂಲ ವಿಷಯಗಳ ಕಡೆ ಹೆಚ್ಚಿನ ಗಮನವಿಟ್ಟು ಸಿನಿಮಾ ಮಾಡುವಂತೆ ಇಮ್ರಾನ್ ಒತ್ತಾಯಿಸಿದ್ದಾರೆ.

ಪಾಕ್ ನಿರ್ಮಾಪಕರಿಗೆ ವಾರ್ನಿಂಗ್ ಕೊಟ್ಟ ಇಮ್ರಾನ್ ಖಾನ್ 

ಇಸ್ಲಾಮಾಬಾದ್ ನಲ್ಲಿ ನಡೆದ ಕಿರುಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಇಮ್ರಾನ್ ಖಾನ್ ಈ ಮಾತನ್ನು ಹೇಳಿದ್ದಾರೆ. ಪಾಕಿಸ್ತಾನ ಚಿತ್ರೋದ್ಯಮ ಬಾಲಿವುಡ್ ನಿಂದ ಪ್ರಭಾವಿತವಾದ ಕಾರಣ ಆರಂಭದಲ್ಲಿ ತಪ್ಪುಗಳು ನಡೆದಿವೆ. ಇದರ ಪರಿಣಾಮದಿಂದ ಮತ್ತೊಂದು ಸಂಸ್ಕೃತಿ ಅಳವಡಿಸಿಕೊಳ್ಳಲು ಕಾರಣವಾಯಿತು ಎಂದಿದ್ದಾರೆ.

"ನಾನು ಯುವ ಚಲನಚಿತ್ರ ನಿರ್ಮಾಪಕರಿಗೆ ಹೇಳಲು ಬಯಸುವ ಪ್ರಮುಖ ವಿಷಯವೆಂದರೆ, ನನ್ನ ಅನುಭವದ ಪ್ರಕಾರ ಸ್ವಂತಿಕೆ ಮಾತ್ರ ಮಾರಾಟವಾಗುತ್ತದೆ. ನಕಲಿಗೆ ಮೌಲ್ಯವಿಲ್ಲ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ ಎಂದು ಎ ಎನ್ ಐ ವರದಿ ಮಾಡಿದೆ. ಪಾಕಿಸ್ತಾನ ಚಲನಚಿತ್ರೋದ್ಯಮಕ್ಕೆ ಹೊಸ ಆಲೋಚನಾ ವಿಧಾನವನ್ನು ತರಲು ಇಮ್ರಾನ್ ಖಾನ್ ಒತ್ತಾಯಿಸಿದರು.

ಪಾಕಿಸ್ತಾನ ಸಂಸ್ಕೃತಿಯ ಮೇಲೆ ಹಾಲಿವುಡ್ ಮತ್ತು ಬಾಲಿವುಡ್ ಪ್ರಭಾವ ಗಮನಿಸಿರುವ ಇಮ್ರಾನ್ ಖಾನ್, ಕಮರ್ಷಿಯಲ್ ವಿಷಯ ಸೇರಿಸದ ಹೊರತು ಜನರು ಸ್ಥಳಿಯ ಸಿನಿಮಾಗಳನ್ನು ವೀಕ್ಷಿಸುವುದಿಲ್ಲ ಎನ್ನುವ ಅಂಶವನ್ನು ಪದೇ ಪದೇ ಉಲ್ಲೇಖಿಸಿದರು.

"ಯುವ ಸಿನಿಮಾ ನಿರ್ದೇಶಕರಿಗೆ ನನ್ನ ಸಲಹೆ ಎಂದರೆ ನಿಮ್ಮದೆ ಆದ ಮೂಲ ಆಸೋಚನೆಗಳನ್ನು ತೆಗೆದುಕೊಂಡು ಬನ್ನಿ. ವೈಫಲ್ಯಕ್ಕೆ ಹೆದರಬೇಡಿ, ಸೋಲಿನ ಭಯದಲ್ಲಿರುವವನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಎಂಬುದು ನನ್ನ ಜೀವನದ ಅನುಭವ"ಎಂದು ಇಮ್ರಾನ್ ಖಾನ್ ಹೇಳಿದರು.

"ಭಯೋತ್ಪಾದನೆ ವಿರುದ್ಧದ ಯುದ್ಧದ ಸಯದಲ್ಲಿ ಪಾಕಿಸ್ತಾನವನ್ನು ತಪ್ಪಾಗಿ ನಿರೂಪಿಸಲ್ಪಟ್ಟಾಗ ಕೀಳರಿಮೆ ಮತ್ತು ರಕ್ಷಣಾತ್ಮಕತೆಯ ಭಾವನೆಯನ್ನು ಆಧರಿಸಲಾಗಿತ್ತು. ತಮ್ಮನ್ನು ಗೌರವಿಸುವ ವ್ಯಕ್ತಿಯನ್ನು ಜಗತ್ತು ಗೌರವಿಸುತ್ತದೆ" ಎಂದು ಇದೇ ಸಮಯದಲ್ಲಿ ಹೇಳಿದರು.