ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ : ವಾಹನ ಸವಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ : ವಾಹನ ಸವಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಹಿನ್ನಲೆಯಲ್ಲಿ ಸಾರ್ವಜನಿಕರ ಓಡಾಟ, ದಿನನಿತ್ಯದ ವಾಹನಗಳ ಸಂಚಾರವನ್ನು ಮತ್ತು ಗಣ್ಯ ವ್ಯಕ್ತಿಗಳ ಭದ್ರತೆಯ ದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಮೋಟಾರ್ ವಾಹನ ಕಾಯ್ದೆಯನ್ವಯ ಅ.15ರಂದು ಬಳ್ಳಾರಿ ನಗರದ ಮುಖಾಂತರ ಸಂಚರಿಸುವ ಭಾರಿ ವಾಹನಗಳನ್ನು ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.

ಬದಲಾಯಿಸಿದ ಮಾರ್ಗಗಳ ವಿವರ: ಅ.15ರಂದು ಬೆಳಗ್ಗೆ 4ರಿಂದ ಮಧ್ಯಾಹ್ನ 1ರವರೆಗೆ ಬೆಂಗಳೂರು ಕಡೆಯಿಂದ ಹೊಸಪೇಟೆ ಕಡೆಗೆ ಸಂಚರಿಸುವ ಭಾರಿ ವಾಹನಗಳು ಚಿತ್ರದುರ್ಗ, ಹಿರಿಯೂರು ಮಾರ್ಗವಾಗಿ ಸಂಚರಿಸುವುದು.

ಅ.15ರಂದು ಬೆಳಗ್ಗೆ 4ರಿಂದ ಮಧ್ಯಾಹ್ನ 1ರವರೆಗೆ ರಾಯಚೂರು, ಸಿಂಧನೂರು ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ಭಾರಿ ವಾಹನಗಳು ಸಿಂಧನೂರು, ಗಂಗಾವತಿ, ಹೊಸಪೇಟೆ, ಚಿತ್ರದುರ್ಗ, ಹಿರಿಯೂರು ಮಾರ್ಗವಾಗಿ ಸಂಚರಿಸುವುದು.

ಅ.15ರಂದು ಬೆಳಗ್ಗೆ 4ರಿಂದ ಮಧ್ಯಾಹ್ನ 1ರವರೆಗೆ ಅದೋನಿ, ಗುಂತಕಲು, ಕಾರೆಕಲ್ಲು, ಅನಂತಪುರ, ಕರ್ನೂಲ್ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ಭಾರಿ ವಾಹನಗಳು ಹೈದ್ರಾಬಾದ್-ಬೆಂಗಳೂರು ಹೈವೆ ರಸ್ತೆ ಮುಖಾಂತರ ಸಂಚರಿಸುವುದು.

ಅ.15ರಂದು ಬೆಳಗ್ಗೆ 4ರಿಂದ ಮಧ್ಯಾಹ್ನ 1ರವರೆಗೆ ಅದೋನಿ, ಗುಂತಕಲ್ಲು, ಕಾರೆಕಲ್ಲು, ಅನಂತ ಪುರ, ಕರ್ನೂಲ್ ಕಡೆಯಿಂದ ಹೊಸಪೇಟೆ ಕಡೆ ಸಂಚರಿಸುವ ಭಾರಿ ವಾಹನಗಳು ಅನಂತಪುರ ರಸ್ತೆ ಬೈಪಾಸ್, ಬೊಮ್ಮನಹಾಳ್ ರಸ್ತೆ, ಬುರ್ನಾಯಕನಹಳ್ಳಿ, ಬೆಂಗಳೂರು ಹೈವೆ ರಿಂಗ್‍ರಸ್ತೆ, ರಾಂಪುರ, ಖಾನಾಹೊಸಹಳ್ಳಿ, ಕೂಡ್ಲಿಗಿ ಮುಖಾಂತರ ಸಂಚರಿಸುವುದು.

ಅ.15ರಂದು ಬೆಳಗ್ಗೆ 4ರಿಂದ ಮಧ್ಯಾಹ್ನ 1ರವರೆಗೆ ಸಿಂಧನೂರು, ಸಿರುಗುಪ್ಪ ಕಡೆಯಿಂದ ಅನಂತಪುರ, ಕರ್ನೂಲ್ ಕಡೆಗೆ ಹೋಗುವ ಮತ್ತು ಬರುವ ಭಾರಿ ವಾಹನಗಳು ಸಿರುಗುಪ್ಪ, ರಾರಾವಿ ಚೆಕ್‍ಪೆÇೀಸ್ಟ್, ಆದೋನಿ ಮುಖಾಂತರ ಸಂಚರಿಸುವುದು.

ಅ.15ರಂದು ಬೆಳಗ್ಗೆ 4ರಿಂದ ಮಧ್ಯಾಹ್ನ 1ರವರೆಗೆ ಸಂಗನಕಲ್ಲು ಹೊರ ವಲಯದಲ್ಲಿ ಐಕ್ಯತಾ ಪಾದಯಾತ್ರೆಯ ವಾಸ್ತವ್ಯವಿರುವುದರಿಂದ ಮೋಕ ಕಡೆಯಿಂದ ಬಳ್ಳಾರಿ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳು ಛತ್ರಗುಡಿ, ಕಾರೇಕಲ್, ಪಿ.ಡಿ.ಹಳ್ಳಿ, ಅನಂತಪುರ ರಸ್ತೆ ಬೈಪಾಸ್, ಮುಖಾಂತರ ಸಂಚರಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.