ಬಜೆಟ್ ನಲ್ಲಿ ರೈತರ ಪರ ಯೋಜನೆ ಜಾರಿಗೊಳಿಸಲಿಲ್ಲ' : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬಜೆಟ್ ನಲ್ಲಿ ರೈತರ ಪರ ಯೋಜನೆ ಜಾರಿಗೊಳಿಸಲಿಲ್ಲ' : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಎರಡನೇ ಬಜೆಟ್ಅನ್ನು ಮಂಡಿಸಿದ್ದು, ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ರಾಜ್ಯ ಬಜೆಟ್ ಕುರಿತು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ. ಮಹಿಳೆಯರಿಗೆ ಸ್ತ್ರೀ ಉನ್ನತಿ ನಿಧಿ ಸ್ಥಾಪಿಸುತ್ತೇವೆ, ಸ್ಮಾರ್ಟ್ ಫೋನ್ ನೀಡುತ್ತೇವೆ ಎಂದಿತ್ತು ಬಿಜೆಪಿ. ಅದ್ಯಾವ ಭರವಸೆಗಳೂ ಈಡೇರಿಲ್ಲ. ಹೀಗಿರುವಾಗ ಅವರು ನಾಮಕಾವಸ್ಥೆಗೆ ಓದುತ್ತಿರುವ ಬಜೆಟ್ನಲ್ಲಿ ನಿರೀಕ್ಷೆ ಇಟ್ಟುಕೊಳ್ಳುವಂತಹ ಮೂರ್ಖತನ ಮತ್ತೊಂದಿಲ್ಲ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ರೈತರ ಕಿವಿ ಮೇಲೆ ಹೂವಿಟ್ಟ ಸರ್ಕಾರ ಒಂದೇ ಒಂದು ರೈತಪರ ಯೋಜನೆ ಜಾರಿಗೊಳಿಸಲಿಲ್ಲ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಈ ಸ್ಥಾನಕ್ಕೆ ಏರಿದ್ದು ಡಬಲ್ ಇಂಜಿನ್ ಸರ್ಕಾರಗಳ ಕೊಡುಗೆಯಿಂದಲೇ. ಬೆಂಬಲ ಬೆಲೆ ಇಲ್ಲ, ಸಾಲ ಮನ್ನವೂ ಇಲ್ಲ, ರೈತರೆಡೆಗೆ ಆಸಕ್ತಿಯೂ ಇಲ್ಲ ಎಂದು ಸರಣಿ ಟ್ವೀಟ್ ಮಾಡಿದೆ.

ಲ್ಯಾಪ್ಟಾಪ್ ಹಂಚಿಕೆಯಿಂದ ಹಿಡಿದು ವಿದ್ಯಾರ್ಥಿವೇತನದವರೆಗೂ ವಿದ್ಯಾರ್ಥಿಗಳಿಗೆ ಬಿಜೆಪಿ ಸರ್ಕಾರ ಎಲ್ಲಾ ತರದಲ್ಲೂ ದ್ರೋಹವೆಸಗಿದೆ. ಈಗಾಗಲೇ SC,ST ವಿದ್ಯಾರ್ಥಿವೇತನದ 4500 ಸಾವಿರ ಕೋಟಿ ಬಾಕಿ ಇದೆ. ಅದನ್ನೇ ಕೊಡದವರು ಬಜೆಟ್ ಘೋಷಣೆಗಳನ್ನು ಈಡೇರಿಸುವರೇ? ಎಂದು ಟ್ವೀಟ್ ಮಾಡಿದೆ.