ಪುನರ್ವಸತಿಗಾಗಿ ಡಿಸಿ ಕಚೇರಿಗೆ ರಾತ್ರಿಯೇ ಬಂದ ಮಾದಿಗ ಸಮಾಜದ ಮುಖಂಡರು
ಧಾರವಾಡ: ಹುಬ್ಬಳ್ಳಿಯ ರಾಜಗೋಪಾಲನಗರ ಹಾಗೂ ವಲ್ಲಭಾಯಿ ನಗರದ ಮಾದಿಗರ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ಮಾದಿ ದಂಡೋರ ಸಂಘದ ಸದಸ್ಯರು ಶುಕ್ರವಾರ ರಾತ್ರಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಎರಡೂ ನಗರಗಳಲ್ಲಿ ಸುಮಾರು 200 ವರ್ಷಗಳ ಹಿಂದೆಯೇ ದಲಿತ ಹಾಗೂ ಮಾದಿಗ ಜನಾಂಗ ವಾಸವಾಗಿದೆ. ಆದರೆ, 2006 ರಲ್ಲಿ ರಾಜಗೋಪಾಲ್ನಗರ ಹಾಗೂ ವಲ್ಲಭಾಯಿ ನಗರದಲ್ಲಿನ ಗುಡಿಸಲುಗಳನ್ನು ಏಕಾಏಕಿ ನೆಲಸಮ ಮಾಡಿದ್ದಾರೆ. ಈ ಸಂಬಂಧ ರಾಜಕಾರಣಿಗಳಿಗೆ ಈ ಸಮಸ್ಯೆ ಗಮನಕ್ಕೆ ತಂದರೂ ವೋಟ್ ಬ್ಯಾಂಕ್ಗೋಸ್ಕರ ಕೇವಲ ಆಶ್ವಾಸನೆ ಕೊಡುತ್ತ ಬಂದಿದ್ದಾರೆ. ಹೀಗಿರುವಾಗ ಮಾದಿಗ ಸಮಾಜದವರು ಜೀವನ ನಡೆಸುವುದೇ ಕಷ್ಟವಾಗಿದೆ. ಮಾದಿಗ ಜನಾಂಗದವರು ಬೀದಿ ಪಾಲಾಗಿದ್ದಾರೆ. ಆದ್ದರಿಂದ ರಾಜಗೋಪಾಲ್ನಗರ ಹಾಗೂ ವಲ್ಲಭಾಯಿ ನಗರದ ಮಾದಿಗ ಸಮಾಜದವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.