ನ್ಯೂ ಇಯರ್​ ಪಾರ್ಟಿ ಮುಗಿಸಿ ಖುಷಿಯಿಂದ ಮನೆಗೆ ತೆರಳುತ್ತಿದ್ದ ಬೆಂಗಳೂರಿನ ಯುವಕ ಮಾರ್ಗದಲ್ಲೇ ದುರ್ಮರಣ!

ನ್ಯೂ ಇಯರ್​ ಪಾರ್ಟಿ ಮುಗಿಸಿ ಖುಷಿಯಿಂದ ಮನೆಗೆ ತೆರಳುತ್ತಿದ್ದ ಬೆಂಗಳೂರಿನ ಯುವಕ ಮಾರ್ಗದಲ್ಲೇ ದುರ್ಮರಣ!

ನೆಲಮಂಗಲ: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮಿಂದೆದ್ದ ಖುಷಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದ ಯುವಕನೊಬ್ಬ ಮಾರ್ಗಮಧ್ಯೆ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಬೆಂಗಳೂರು ಉತ್ತರ ತಾಲೂಕು ತಮ್ಮೇನಹಳ್ಳಿ ಬಳಿ ಸಂಭವಿಸಿದೆ.

ಬೆಂಗಳೂರಿನ ಕುರುಬರಹಳ್ಳಿ ನಿವಾಸಿ ಗಿರೀಶ್ (18) ಮೃತ ದುರ್ದೈವಿ. ಸ್ನೇಹಿತರೊಂದಿಗೆ ಹೊಸ ವರ್ಷದ ಪಾರ್ಟಿಗೆ ತೆರಳಿದ್ದ ಗಿರೀಶ್, ಪಾರ್ಟಿ ಮುಗಿಸಿ ವಾಪಸ್​ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದ.

ಕುಡಿದ ಅಮಲಿನಲ್ಲಿದ್ದ ಗಿರೀಶ್​, ನಿಯಂತ್ರಣತಪ್ಪಿ ಬೈಕ್​ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಮಗನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ ಖುಷಿಯಾಗಿ ಪಾರ್ಟಿ ಮಾಡಿದ್ದ ಸ್ನೇಹಿತ ಇನ್ನಿಲ್ಲ ಎಂಬ ವಿಷಯ ಸ್ನೇಹಿತರಿಗೂ ಆಘಾತ ತರಿಸಿದೆ.