ನೋಟು ಅಮಾನ್ಯೀಕರಣದ ಬಗ್ಗೆ ಸುಪ್ರೀಂ ಇಂದು ಮಹತ್ವದ ತೀರ್ಪು

ನೋಟು ಅಮಾನ್ಯೀಕರಣದ ಬಗ್ಗೆ ಸುಪ್ರೀಂ ಇಂದು ಮಹತ್ವದ ತೀರ್ಪು

500, 1,000 ರೂ. ಮುಖಬೆಲೆಯ ಕರೆನ್ಸಿ ನೊಟು ಅಮಾನ್ಯಗೊಳಿಸಿದ 2016ರ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. ಸುಪ್ರೀಂನ ಐವರು ನ್ಯಾಯಾಧೀಶರ ಪೀಠ ಇಂದು ತೀರ್ಪು ನೀಡಲಿದೆ. ನೋಟು ಅಮಾನ್ಯೀಕರಣಕ್ಕೆ ಅಗತ್ಯವಾದ ಕಾರ್ಯವಿಧಾನ ಅನುಸರಿಸಲಾಗಿಲ್ಲ ಮತ್ತು ಅನಿಯಂತ್ರಿತ ನಿರ್ಧಾರದಿಂದಾಗಿ ಭಾರತೀಯ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು.