ನಿಶ್ಚಿತಾರ್ಥದ ಉಂಗುರ ರಿವೀಲ್ ಮಾಡಿದ ನಟಿ ಹರಿಪ್ರಿಯಾ

ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಡಿ. 3ರಂದು ತಮ್ಮ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸದ್ಯ ಹರಿಪ್ರಿಯಾ ಅವರು ನಿಶ್ಚಿತಾರ್ಥದ ಉಂಗುರದ ಕೆಲ ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ಎರಡನೇ ಹೆಸರು ಸಿಂಹ ಎಂದು ಹೇಳಲು ಖುಷಿಯಾಗುತ್ತದೆ. ನಮ್ಮ ನಿಶ್ಚಿತಾರ್ಥದ ಉಂಗುರಗಳು ಅದನ್ನು ಪ್ರತಿಬಿಂಬಿಸಬೇಕೆಂದು ನಾನು ಬಯಸುತ್ತೇನೆ. ಈ ಉಂಗುರ ನಮ್ಮ ಜೀವನದ ವಿಶೇಷ ಭಾಗವಾಗಲಿದೆ' ಎಂದು ನಟಿ ಹರಿಪ್ರಿಯಾ ಬರೆದುಕೊಂಡಿದ್ದಾರೆ.