ನಾಗರಹಾವಿನೊಂದಿಗೆ ಹುಡುಗಾಟವಾಡಲು ಹೋಗಿ ಐದಕ್ಕೂ ಹೆಚ್ಚು ಬಾರಿ ಕಚ್ಚಿಸಿಕೊಂಡು ವೃದ್ಧ ಸಾವು
ಯಾದಗಿರಿ : ನಾಗರಹಾವಿನೊಂದಿಗೆ ಹುಡುಗಾಟವಾಡಿದ ವೃದ್ಧನೋರ್ವ ಅದೇ ಹಾವಿನಿಂದ ಐದಕ್ಕೂ ಹೆಚ್ಚು ಬಾರಿ ಕಚ್ಚಿಸಿಕೊಂಡು, ಮಸಣ ಸೇರಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ಘಟನೆ ನಡೆದಿದ್ದು ಹಾವು ಕಚ್ಚಿ ಸಾವನ್ನಪ್ಪಿದವರನ್ನು ಬಸವರಾಜ್ ಪೂಜಾರಿ ಎಂದು ಗುರುತಿಸಲಾಗಿದೆ.
6 ಅಡಿ ಉದ್ದವಿದ್ದ ನಾಗರಹಾವು ಮನೆಯೊಂದಕ್ಕೆ ಹೊಕ್ಕಿತ್ತು, ಅದನ್ನು ಹಿಡಿಯಲು ಬಸವರಾಜ್ ಮುಂದಾಗಿದ್ದರು. ಹಿಡಿದ ಬಳಿಕ ಅದರ ಜೊತೆಗೆ ಒಂದು ಗಂಟೆಗೂ ಅಧಿಕ ಹೊತ್ತು ಚೆಲ್ಲಾಟವಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಾವು ಸಿಕ್ಕ, ಸಿಕ್ಕ ಕಡೆ ಐದು ಬಾರಿ ಕಚ್ಚಿ ವೃದ್ಧನನ್ನು ಸಾಯಿಸಿ ತಾನು ಸಹ ಸಾವನ್ನಪ್ಪಿದೆ. ಮೃತಪಟ್ಟ ಬಸವರಾಜ್ ಈ ಹಿಂದೆ ಗ್ರಾಮದಲ್ಲಿ ಹಾವುಗಳನ್ನು ಹಿಡಿಯುತ್ತಿದರು. ಇದುವರೆಗೆ 300 ಕ್ಕೂ ಅಧಿಕ ಹಾವುಗಳನ್ನು ಹಿಡಿದಿದ್ದರು.