ನವೋದಯ ವಿದ್ಯಾಲಯ ಪ್ರವೇಶ ಬಯಸಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಮಾಹಿತಿ
ನವೋದಯ ವಿದ್ಯಾಲಯ ಪ್ರವೇಶ ಬಯಸಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಸುವ ದಿನಾಂಕವನ್ನು ಈಗ ಮತ್ತೆ ವಿಸ್ತರಿಸಲಾಗಿದೆ.
2023 - 24 ನೇ ಸಾಲಿಗೆ ಆರನೇ ತರಗತಿಗೆ ಆನ್ಲೈನ್ ಮೂಲಕ ಆಹ್ವಾನಿಸಿರುವ ಅರ್ಜಿ ಸಲ್ಲಿಸುವ ದಿನಾಂಕವನ್ನು ಫೆಬ್ರವರಿ 15 ರ ವರೆಗೆ ವಿಸ್ತರಿಸಲಾಗಿದೆ.
ಹಾಗೆಯೇ ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಅರ್ಜಿಯಲ್ಲಿ ತಿದ್ದುಪಡಿ ಮಾಡಬೇಕಾದಲ್ಲಿ ಫೆಬ್ರವರಿ 16 ಮತ್ತು 17ರಂದು ಆನ್ಲೈನ್ www.navodaya.gov.in ವೆಬ್ ಸೈಟ್ ಮೂಲಕ ಅವಕಾಶ ನೀಡಲಾಗಿದೆ ಎಂದು ತಿಳಿಸಲಾಗಿದೆ.