ದೇಶದಲ್ಲಿ ಭೂಕಂಪನ , ಜಲ ಪ್ರಳಯ ಸಂಭವಿಸುತ್ತೆ' : ಬಬಲಾದಿ ಸದಾಶಿವ ಮಠದ ಸ್ವಾಮೀಜಿ ಭವಿಷ್ಯ

ದೇಶದಲ್ಲಿ ಭೂಕಂಪನ , ಜಲ ಪ್ರಳಯ ಸಂಭವಿಸುತ್ತೆ' : ಬಬಲಾದಿ ಸದಾಶಿವ ಮಠದ ಸ್ವಾಮೀಜಿ ಭವಿಷ್ಯ

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2023 ರ ಕಾಲಜ್ಞಾನ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ದೇಶದಲ್ಲಿ ಭೂಕಂಪನ ಹಾಗೂ ಜಲಪ್ರಳಯ ಉಂಟಾಗಲಿದೆ ಎಂದು ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಭೂಮಿ ಕುಪ್ಪಳಿಸಲಿದೆ ಎಂದು ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಇದೀಗ ಭವಿಷ್ಯ ನುಡಿದಿದ್ದಾರೆ.

ಸಜ್ಜನರು ಕೂಡ ದುರ್ಜನರಾಗುತ್ತಾರೆ, ಹಿಂಗಾರು ಮುಂಗಾರು ಮಳೆ ಉತ್ತಮವಾಗಲಿದೆ.ನಮ್ಮ ನಮ್ಮಲ್ಲಿ ಜಗಳ ಹೊಡೆದಾಟ ನಡೆಯುತ್ತದೆ, ರಾಜ್ಯದಲ್ಲಿ ಕೊಲೆ, ಸುಲಿಗೆ ಪ್ರಕರಣ ಹೆಚ್ಚಲಿದೆ, ವೈಶಾಖ, ಜ್ಯೇಷ್ಟ ಮಾಸದಲ್ಲಿ ಶುಭವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲಲ್ಲಿ.. ಮೂಲೆಗಳಲ್ಲಿ ಭೂಮಿ ಕುಪ್ಪಳಿಸಿತೋ ಮಕ್ಕಳಿರ್ಯಾ ಎಂದು ಭವಿಷ್ಯ ನುಡಿದಿರುವ ಅವರು ಭೂಕಂಪನದ ಕುರಿತು ಎಚ್ಚರಿಕೆ ನೀಡಿದ್ದಾರೆ. ಸಜ್ಜನರು ಕೂಡ ದುರ್ಜನರು ಆಗುತ್ತಾರೆ, ನಮ್ಮ ನಮ್ಮಲ್ಲಿ ಜಗಳ ಹೊಡೆದಾಟಗಳೂ ಆಗಲಿವೆ ,ಜಲಪುಳಯದ ಎಚ್ಚರಿಕೆಯನ್ನೂ ನೀಡಿ ಇನ್ನೊಂದು ಸೂತಕದ ಛಾಯೆ ಐತಿ ಎಂದಿದ್ದಾರೆ. ಯಾವುದೋ ಒಂದು ದಿಕ್ಕಿನಲ್ಲಿ ಜಲ ಪುಳಯವಾಗಲಿದೆ ಎಂದ ಸಿದ್ರಾಮಯ್ಯ ಸ್ವಾಮೀಜಿ, ಕೆಲವೊಂದು ಕಡೆ ಭೂಮಿ ಕುಪ್ಪಳಿಸಲಿದೆ ಎಂದಿದ್ದಾರೆ.

ಮಕ್ಕಳಿಗೆ ತಂದೆ-ತಂದೆ ತಾಯಿ ಮೇಲೆ ಹೆಚ್ಚಿನ ಪ್ರೀತಿ ಉಂಟಾಗಲಿದೆ. ಇದರಿಂದ ವೃದ್ದಾಶ್ರಮ ಕಡಿಮೆಯಾಗಲಿದೆ. ಗಡಿಕಾಯುವ ಯೋಧರಿಗೆ ಜಯ ಉಂಟಾಗಲಿದೆ, ಮುಂಗಾರು ಮಳೆ 9 ಆಣೆ, ಹಿಂಗಾರು ಮಳೆ 10 ಆಣೆಯಾಗಲಿದೆ ಎಂದು ಸದಾಶಿವ ಮುತ್ಯಾನ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.ಈ ಮಠದ ಕಾರ್ಣಿಕರು ನುಡಿಯುವ ಭವಿಷ್ಯಗಳು ಈವರೆಗೂ ಸುಳ್ಳಾಗಿಲ್ಲ ಎಂಬುದು ಭಕ್ತರ ನಂಬಿಕೆ. ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಅವರು ನುಡಿದ ಭವಿಷ್ಯ ಹಲವು ಭಾರಿ ನಿಜವಾಗಿದೆ.