ದುನಿಯಾ ವಿಜಯ್ ಮುಂದಿನ ಪ್ರಾಜೆಕ್ಟ್ ಗೇ ಹೀರೋಯಿನ್ ಫಿಕ್ಸ್..!

ದುನಿಯಾ ವಿಜಯ್ ಈಗ ಫುಲ್ ಬ್ಯುಸಿ ಆಗಿದ್ದಾರೆ.ಇತ್ತೀಚಿಗಷ್ಟೇ ಅಭಿಮಾನಿಗಳ ಜೊತೆ ಸಖತ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಪ್ರೇಮಿಗಳ ದಿನದ ವಿಶೇಷವಾಗಿ ಭೀಮ ಸಿನಿಮಾದ ಹೀರೋಯಿನ್ ಯಾರು ಅನ್ನೋ ಮ್ಯಾಟರ್ ನ ಇದೀಗ ರಿವಿಲ್ ಮಾಡಿದ್ದಾರೆ ಸಲಗ.ಇವರ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿ ಬರುತ್ತಿರುವ ಭೀಮಾ ಸಿನಿಮಾದ ನಾಯಕಿಯನ್ನು ಪರಿಚಯಿಸಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ.
ರಂಗಭೂಮಿಯ ಪ್ರತಿಭೆಯನ್ನು ಈ ಬಾರಿ ತಮ್ಮ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ ದುನಿಯಾ ವಿಜಯ್. ಈ ಸಿನಿಮಾದಲ್ಲಿ ಅಶ್ವಿನಿ ಯಾವ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ಬಿಡುಗಡೆ ಆಗಿರುವ ಫಸ್ಟ್ ಲುಕ್ ನಾನಾ ಸುದ್ದಿಗಳನ್ನು ನೀಡುತ್ತಿದೆ.
ಸಲಗ ಸಿನಿಮಾದ ಕಂಪ್ಲೀಟ್ ಜವಾಬ್ದಾರಿ ಹೊತ್ತು ಹಿಟ್ ಲಿಸ್ಟ್ ಸೇರುವಂತೆ ಮಾಡಿದ ದುನಿಯಾ ವಿಜಯ್ ಈಗ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೇ ಇಳಿದಿದ್ದಾರೆ.
ಭೀಮ ಸಿನಿಮಾ ಮೂಲಕ ಮತ್ತೇ ದೊಡ್ಡ ಹೊಣೆಗಾರಿಕೆಯನ್ನ ಹೆಗಲ ಮೇಲೆ ಹಾಕೊಂಡು ಸಿನಿಪ್ರಿಯರಿಗೆ ಸಖತ್ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ತೆಲುಗು ಸಿನಿಮಾದಲ್ಲಿ ಮಿಂಚು ಹರಿಸಿರೋ ದುನಿಯಾ ವಿಜಯ್ ಈಗ ಫುಲ್ ಬ್ಯುಸಿ ನಟ.ಭೀಮ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗೋ ಲಕ್ಷಣ ಕಾಣಿಸುತ್ತಿದೆ.ಭೀಮ ಸಿನಿಮಾದ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ನೋಡೋಣ ಮುಂದಿನ ದಿನಗಳಲ್ಲಿ ಯಾವ ರೀತಿಯ ಅಪ್ಡೇಟ್ ಕೊಡ್ತಾರೆ ಅಂತ.
ಸಲಗ ಸಿನಿಮಾದಲ್ಲಿ ಹೊಸ ಪ್ರತಿಭೆಗಳಿಗೆ ದುನಿಯಾ ವಿಜಯ್ ಅವಕಾಶ ಕೊಟ್ಟು ಅವರ ಬದುಕಿಗೆ ದಾರಿದೀಪವಾಗಿದ್ದರು. ಭೀಮ ಸಿನಿಮಾದಲ್ಲೂ ಹೊಸ ಟ್ಯಾಲೆಂಟ್ ಗಳಿಗೆ ಅವಕಾಶ ಕೊಟ್ಟು ಇಂಡಸ್ಟ್ರಿ ಬೆಳೆಸುವಲ್ಲಿ ಕೆಲಸ ಮಾಡುತ್ತಿದ್ದಾರೆ ದುನಿಯಾ ವಿಜಯ್.ಸೋ ನಮ್ಮ ಕಡೆಯಿಂದಲೂ ಸಲಗನಿಗೆ ಆಲ್ ದಿ ಬೆಸ್ಟ್.