ದೀಪಾವಳಿ ಮುನ್ನವೇ ದೆಹಲಿ ಗಾಳಿ ಮತ್ತಷ್ಟು ಮಲೀನ
ನವದೆಹಲಿ,ಅ.22-; ದೀಪಾವಳಿ ಹಬ್ಬ ಆರಂಭಕ್ಕೂ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿ ಮಲಿನ ದುಪ್ಪಟ್ಟಾಗಿದೆ.
ಹಬ್ಬ ಆರಂಭಕ್ಕೂ ಮುನ್ನವೆ ಈ ರೀತಿಯಾದರೆ, ಹಬ್ಬದ ನಂತರ ದೆಹಲಿ ಪರಿಸ್ಥಿತಿ ಹೇಗಿರಲಿದೆ ಎಂಬ ಚಿಂತೆ ಪರಿಸರ ಪ್ರೇಮಿಗಳನ್ನು ಕಾಡತೊಡಗಿದೆ.
ಈಗಾಗಲೇ ಕಲುಷಿತ ನಗರವೆಂಬ ಕುಖ್ಯಾತಿಗೆ ಒಳಗಾಗಿರುವ ದೆಹಲಿಯ ಗಾಳಿ ಗುಣಮಟ್ಟ ಕಳಪೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆದರೂ, ಗಾಳಿಯ ಗುಣಮಟ್ಟ ಕಾಪಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಯಾವುದೆ ಪ್ರಯೋಜನವಾಗುತ್ತಿಲ್ಲ.
ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ತಡೆಯಲು ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಆಯೋಗ ತುರ್ತು ಸಭೆ ನಡೆಸಿದ್ದರೂ, ದೀಪಾವಳಿಗೆ ಒಂದೆರಡು ದಿನಗಳು ಬಾಕಿ ಇರುವಾಗ ದೆಹಲಿಯ ಆಕಾಶದಲ್ಲಿ ದಟ್ಟವಾದ ಹೊಗೆಯ ಪದರ ಕಂಡು ಬಂದಿರುವುದು ಆತಂಕ ಸೃಷ್ಟಿಸಿದೆ.