ದಿನಭವಿಷ್ಯ: ಇಂದು ನಿಮಗೆ ಸೋಲಿಲ್ಲ, ಯಾವುದೇ ಚಾಲೆಂಜ್ ಬೇಕಾದರೂ ಸ್ವೀಕರಿಸಿ!

ದಿನಭವಿಷ್ಯ: ಇಂದು ನಿಮಗೆ ಸೋಲಿಲ್ಲ, ಯಾವುದೇ ಚಾಲೆಂಜ್ ಬೇಕಾದರೂ ಸ್ವೀಕರಿಸಿ!

ಮೇಷ

ತರರಿಂದ ಇಂದು ನೀವು ಉಪಯುಕ್ತ ಪಾಠ ಕಲಿಯುವಿರಿ. ಅದು ನಿಮ್ಮ ನಿಲುವು, ಧೋರಣೆ ಬದಲಿಸಬಹುದು. ಅದನ್ನು ಸ್ಫೂರ್ತಿಯಿಂದ ಸ್ವೀಕರಿಸಿರಿ.

ವೃಷಭ
ಯಾವುದೇ ವಿಚಾರದಲ್ಲೂ ನಿಮ್ಮನ್ನು ಇಂದು ಯಾರೂ ಮಣಿಸಲಾರರು. ನಿಮ್ಮ ಪ್ರತಿಸ್ಪರ್ಧಿಗಳು ಸೋಲು ಕಾಣುವರು.

ಆರ್ಥಿಕ ಸಮಾಧಾನದ ದಿನ.

ಮಿಥುನ
ಚಿಂತೆ, ಸಮಸ್ಯೆ, ಕಷ್ಟ ಇಲ್ಲದ ನಿರಾಳ ದಿನ. ಹಾಗೆಂದು ಒಂದೇ ದಿನ ಎಲ್ಲಾ ಕೆಲಸಗಳನ್ನು ಕೈಗೆತ್ತಿಕೊಳ್ಳದಿರಿ. ಎಲ್ಲವೂ ಅಪೂರ್ಣ ವಾಗಿ ಉಳಿದೀತು.

ಕಟಕ
ಅತಿಯಾದ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಬೇಡಿ. ಸಣ್ಣ ಮಟ್ಟಿನ ಹಿನ್ನಡೆ ಸಂಭವಿಸಬಹುದು. ನಡೆನುಡಿಯಲ್ಲಿ ಸಂಯಮವಿರಲಿ.

ಸಿಂಹ
ಪ್ರೀತಿಪಾತ್ರರ ಜತೆ
ಹೆಚ್ಚು ಕಾಲ ಕಳೆಯು ವಿರಿ. ನಿಮ್ಮ ಆಸಕ್ತಿಯ ವಿಷಯದಲ್ಲಿ ಗಮ ನಾರ್ಹ ಸಾಧನೆ. ನಿಮ್ಮ ಮೆಚ್ಚುಗೆ ಪಡೆಯಲು ಕೆಲವರ ಯತ್ನ.

ಕನ್ಯಾ
ಸವಾಲುಗಳ ಕುರಿತು ಆಪ್ತರ ಜತೆ ಚರ್ಚಿಸಿ. ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೂ ಮನಸ್ಸಿಗೆ ನೆಮ್ಮದಿ ಸಿಗಬಹುದು. ಅಧಿಕ ವ್ಯಯ. ಖರ್ಚು ನಿಯಂತ್ರಿಸಿ.

ತುಲಾ
ವೃತ್ತಿಯಲ್ಲಿ ಅತ್ಯಂತ ಸಫಲ ಮತ್ತು ಸುಗಮ ದಿನ. ನಿಮ್ಮ ನಾಯಕತ್ವ ಗುಣವು ಬೆಳಕಿಗೆ ಬರುವುದು. ಉದ್ದೇಶಿತ ಗುರಿ ಸಾಧನೆ. ಕೌಟುಂಬಿಕ ಸಹಕಾರ.

ವೃಶ್ಚಿಕ
ಆರ್ಥಿಕವಾಗಿ ನಿಮಗೆ ಅನುಕೂಲಕರ ದಿನ. ವ್ಯವಹಾರದಲ್ಲಿ ಲಾಭ. ಆದರೆ ನಿಮ್ಮ ಆಪ್ತರೇ ನಿಮ್ಮ ವಿರುದ್ಧ ಕಾರ್ಯಾಚರಿಸುವ ಸಾಧ್ಯತೆಯಿದೆ. ಅವರ ಬಗ್ಗೆ ಎಚ್ಚರದಿಂದಿರಿ.

ಧನು
ನಿಮ್ಮ ಬದುಕಿಗಿಂದು ತಿರುವು ದೊರಕೀತು. ಸಂಬಂಧಗಳು ಆದ್ಯತೆಯ ವಿಷಯವಾ
ಗುವುದು.ಆರ್ಥಿಕ ಲಾಭ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ.

ಮಕರ
ವೃತ್ತಿಯಲ್ಲಿ , ವ್ಯವಹಾರದಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು. ಆದರೆ ಕೌಟುಂಬಿಕ ಪರಿಸ್ಥಿತಿ ಸಮಸ್ಯೆ ಮತ್ತು ಒತ್ತಡ ಸೃಷ್ಟಿಸೀತು.

ಕುಂಭ
ನಿಮ್ಮ ಸ್ನೇಹ ಬಳಗ ದೊಡ್ಡದು. ಹಾಗಾಗಿ ಸಮಸ್ಯೆ ಬಂದರೂ ಅವರಿಂದ ನೆರವು ಸಿಗುವುದು. ಇಂದು ಅಂತಹ ನೆರವು ಪಡೆಯುವ ಸಮಯ.

ಮೀನ
ಹಣಕ್ಕೆ ಸಂಬಂಧಿಸಿದ ಗೊಂದಲಗಳನ್ನು ಸರಿಪಡಿಸಿಕೊಳ್ಳಲು ಆದ್ಯತೆ ಕೊಡಿ. ಅದನ್ನು ಹಾಗೇ ಮುಂದುವರಿಯಲು ಬಿಡಬೇಡಿ.