ದಾಖಲೆ ಇಲ್ಲದೆ 49 ಲಕ್ಷ ರೂ ಸಾಗಾಟ: ಧೂಳಖೇಡ ಚೆಕ್ ಪೋಸ್ಟಿನಲ್ಲಿ ಜಪ್ತಿ

ಹೊಸದಿಗಂತ ವರದಿ ವಿಜಯಪುರ:
ದಾಖಲೆ ಇಲ್ಲದೇ ಸಾಗಿಸುತ್ತಿದ್ದ 49 ಲಕ್ಷ ರೂ. ಗಳನ್ನು ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಚೆಕ್ ಪೋಸ್ಟಿನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಮಹಾರಾಷ್ಟ್ರದ ಸೊಲ್ಲಾಪುರದಿಂದ ವಿಜಯಪುರದ ಇಂಡಿಗೆ ಬಳಿ ಕ್ಯಾಂಟರ್‌ನಲ್ಲಿ ಡ್ರೈವರ್ ತನ್ನ ಕಾಲಕೆಳಭಾಗದಲ್ಲಿ ಬ್ಯಾಗಿನಲ್ಲಿಟ್ಟು ಸಾಗಿಸುತ್ತಿದ್ದ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಇಂಡಿ ಪಟ್ಟಣದ ಎಪಿಎಂಸಿ ವರ್ತಕ, ಅಡತಿ ಅಂಗಡಿ ಮಾಲೀಕ ಮಂಜುನಾಥ ಎನ್ನುವವರಿಗೆ ಸೇರಿದ ನಗದು ಎನ್ನುವುದು ತಿಳಿದು ಬಂದಿದೆ.
ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.