ತುಮಕೂರಿನಿಂದ ಭಾರತ್‌ ಜೋಡೋ ಯಾತ್ರೆ ಆರಂಭ; ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದ ಅಸಮಾಧಾನಿತರು

ತುಮಕೂರಿನಿಂದ ಭಾರತ್‌ ಜೋಡೋ ಯಾತ್ರೆ ಆರಂಭ; ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದ ಅಸಮಾಧಾನಿತರು

ತುಮಕೂರು: ಕಾಂಗ್ರೆಸ್‌ ನ ಭಾರತ್‌ ಜೋಡೋ ಯಾತ್ರೆ ಇಂದು 7ನೇ‌ಕ್ಕೆ ಕಾಲಿಟ್ಟಿದೆ. ತುಮಕೂರಿನ ತುರುವೆಕೆರೆಯ ಮಾಯಸಂದ್ರದಿಂದ ಇಂದು ಬೆಳಗ್ಗೆ ಪ್ರಾರಂಭವಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರೆದಿದ್ದು ರಾಹುಲ್ ಗಾಂಧಿ ಜೊತೆ ಡಾ.ಜಿ ಪರಮೇಶ್ವರ್, ಕೆ‌ಸಿ ವೇಣುಗೋಪಾಲ್, ಶ್ರೀನಿವಾಸ್, ರಾಜಣ್ಣ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಹಲವರು ಹೆಜ್ಜೆ ಹಾಕುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಅರಳಿಕೆರೆ ಪಾಳ್ಯದಲ್ಲಿ ಯಾತ್ರೆಗೆ ಬ್ರೇಕ್​​ ಸಿಗಲಿದೆ.
ಪಾದಯಾತ್ರೆ ನಡುವೆ ಗಣೇಶ ದೇವಸ್ಥಾನದ ಅರ್ಚಕರು ರಾಹುಲ್‌ ಗಾಂಧಿಗೆ ತಿಲಕವಿಟ್ಟು ಆಶಿರ್ವಾದ ಮಾಡಿದ್ದಾರೆ. ಇನ್ನು ಪಾದಯಾತ್ರೆಯಲ್ಲಿ ಅಂತರದಲ್ಲಿ ನಡೆಯುತ್ತಿದ್ದ ಜೆಡಿಎಸ್ ಮಾಜಿ ಶಾಸಕ ಗುಬ್ಬಿ ಶ್ರೀನಿವಾಸ್ ಅವರನ್ನು ಕರೆದು ರಾಹುಲ್‌ ಗಾಂಧಿ ಮಾತನಾಡಿಸಿದ್ದು ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಇದರ ಜೊತೆಗೆ ಪಾದಯಾತ್ರೆ ನಡುವೆ ಶಾಂತಿ ಸಂಕೇತವಾಗಿ ದಲಿತ ಮುಖಂಡರು ರಾಹುಲ್ ಗಾಂಧಿಗೆ ಬುದ್ದನ ಮೂರ್ತಿ ಕಾಣಿಕೆ ನೀಡಿದರು.