ತಮಿಳುನಾಡಿನಲ್ಲಿ ಘೋರ ದುರಂತ; ದೇವರ ಉತ್ಸವದ ವೇಳೆ ಕ್ರೇನ್ ಕುಸಿದು ನಾಲ್ವರು ಸಾವು, 9 ಮಂದಿಗೆ ಗಾಯ
ರಾಣಿಪೇಟೆ (ತಮಿಳುನಾಡು): ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಕುಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿರುವ ಘಟನೆ ರಾಣಿಪೇಟೆ ಜಿಲ್ಲೆಯ ಅರಕ್ಕೋಣಂ ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಇಲ್ಲಿನ ಕಿಲ್ವೀಡಿ ಗ್ರಾಮದಲ್ಲಿರುವ ದ್ರೌಪತಿ ದೇವಸ್ಥಾನದಲ್ಲಿ ನಿನ್ನೆ ದ್ರೌಪತಿ ಅಮ್ಮನವರ ಉತ್ಸವ ನಡೆಯುತ್ತಿತ್ತು.
ಪೊಂಗಲ್ ನಂತರದ ಸಾಂಪ್ರದಾಯಿಕ ಹಬ್ಬವು ಅರಕ್ಕೋಣಂ ಬಳಿಯ 'ದ್ರೌಪತಿ' ಮತ್ತು 'ಮಂಡಿಯಮ್ಮನ್' ದೇವಾಲಯಗಳಲ್ಲಿ ವಾರ್ಷಿಕವಾಗಿ ನಡೆಯುತ್ತದೆ. ಭಕ್ತರು ತಮ್ಮ ಭಕ್ತಿಯ ಸಂಕೇತವಾಗಿ ಕ್ರೇನ್ ಮೇಲೆ ಹತ್ತುವ ಮೂಲಕ ದೇವರು ಮತ್ತು ದೇವತೆಗೆ ಹಾರ ಹಾಕುತ್ತಾರೆ. ಆದ್ರೆ, ಈ ಬಾರೀ ಕ್ರೇನ್ ಬಳಸಲು ಅಧಿಕಾರಿಗಳು ಯಾವುದೇ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ.