ಡಿ.10ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಸ-ಅಭಿವೃದ್ಧಿ ಸಂಘದಿಂದ "ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮ

ಕರ್ನಾಟಕ ರಾಜ್ಯ ಸ-ಅಭಿವೃದ್ಧಿ ಸಂಘದ ವತಿಯಿಂದ, ಡಿಸೆಂಬರ್ 10ರಂದು ಸಂಜೆ 4 ಘಂಟೆಗೆ,
ಹುಬ್ಬಳ್ಳಿಯ ಡಾ.ಡಿ.ಎಸ್.ಕರ್ಕಿ ಕನ್ನಡ ಭವನದಲ್ಲಿ "ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೆ.ಫಾಸ್ಟನರ್ಸ್ ಆಂಡ್ ಅಲೈಡ್ ಪ್ರೊಡಕ್ಟ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ವೀರೇಂದ್ರ ಕೌಜಲಗಿ ಅವರು, ಸಮಾರಂಭ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಉಮಾ ಮುಕುಂದ್ ಮತ್ತು ಉತ್ತರ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಣ್ಣ ಉದ್ದಿಮೆದಾರರ ಸಂಘದ ಅಧ್ಯಕ್ಷ ಗೋವಿಂದ್ ದಂಡಗಿ ಪಾಲ್ಗೊಳ್ಳಲಿದ್ದಾರೆ.
ಮುರುಘಾ ಮಠದ ಪರಮ ಪೂಜ್ಯ ಮಲ್ಲಿಕಾರ್ಜುನ ಮಹಾಂತ ಸ್ವಾಮೀಜಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಲಿದ್ದು, ಕರ್ನಾಟಕ ರಾಜ್ಯ ಸ-ಅಭಿವೃದ್ಧಿ ಸಂಘದ ಅಧ್ಯಕ್ಷ ಸುಭಾಷ್ ಬಿ.ನೇತ್ರೇಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ನಂತರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸುಮಧುರವಾದ ಜನಪದ ಹಾಗೂ ಭಾವಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
9 ಲೈವ್ ನ್ಯೂಸ್ ಧಾರವಾಡ