ಡಿಕೆಶಿ ಸೋಲಿಸಲು 500 ಕೋಟಿ ಸುಪಾರಿ ಕೊಟ್ಟಿದ್ದಾರೆ : ಸಚಿವ ಆರ್.ಅಶೋಕ್ ಹೊಸ ಬಾಂಬ್

ಹೊಸಕೋಟೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಸೋಲಿಸಲು 500 ಕೋಟಿ ರೂ. ಸುಪಾರಿ ಕೊಟ್ಟಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸದ್ಯ ಎರಡು ಬಣಗಳಿದ್ದು, ಡಿ.ಕೆ.
ಡಿ.ಕಾಂಗ್ರೆಸ್ ಸೋಲಿಸಲು ಎಸ್ ಕಾಂಗ್ರೆಸ್ 500 ಕೋಟಿ ರೂ. ಸುಪಾರಿ ನೀಡಲಾಗಿದೆ. ಕಾಂಗ್ರೆಸ್ ನಲ್ಲಿ ಡಿ ಕಾಂಗ್ರೆಸ್ ವರ್ಸಸ್ ಎಸ್ ಕಾಂಗ್ರೆಸ್ ಆಗಿದೆ. ಇವರಿಬ್ಬರಿಂದ ಬಿಜೆಪಿಗೆ ಲಾಭವಾಗಲಿದೆ. ಇವರಿಬ್ಬರಲಿಲ್ಲದಿದ್ದರೂ ಕೂಡ ಬಿಜೆಪಿಗೆ ಲಾಭವಾಗಲಿದೆ.ಈಗಾಗಲೇ ನರೇಂದ್ರ ಮೋದಿ, ಅಮಿತ್ ಶಾ ಹವಾ ಶುರುವಾಗಿದೆ.ಮೂರ್ನಾಲ್ಕು ದಿನಗಳಲ್ಲಿ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರ್ತಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಮೋದಿ ರಾಜ್ಯಕ್ಕೆ ಬರಲಿದ್ದಾರೆ ಎಂದರು.