ಟಿಕೆಟ್ ಹಂಚಿಕೆಗೆ ಕಾಂಗ್ರೆಸ್ನಿಂದ ಸಮಿತಿ ರಚನೆ
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ದಿಲ್ಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆದ ಬೆನ್ನಲ್ಲೇ ಟಿಕೆಟ್ ಹಂಚಿಕೆಗೆ ಸಮಿತಿ ರಚನೆ ಮಾಡಿದೆ. 36 ಮಂದಿಯನ್ನು ಒಳಗೊಂಡ ಕೆಪಿಸಿಸಿ ಚುನಾವಣಾ ಸಮಿತಿ ರಚಿಸಿದೆ. ಈ ಮೂಲಕ ಕಾಂಗ್ರೆಸ್, ಟಿಕೆಟ್ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಟಿಕೆಟ್ಗಾಗಿ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ಈ ಸಮಿತಿ ಪರಿಶೀಲನೆ ಮಾಡಲಿದ್ದು, ಬಳಿಕ ಪ್ರತಿ ಕ್ಷೇತ್ರದಲ್ಲಿ 1ರಿಂದ 3 ಹೆಸರು ಶಿಫಾರಸು ಮಾಡಲಿದೆ.