ಜ.5ರಿಂದ 2ನೇ ಹಂತದ ಪಂಚರತ್ನ ರಥಯಾತ್ರೆ ಆರಂಭ - HDK

ಜ.5ರಿಂದ 2ನೇ ಹಂತದ ಪಂಚರತ್ನ ರಥಯಾತ್ರೆ ಆರಂಭ - HDK

ಬೆಂಗಳೂರು: ಈಗಾಗಲೇ ಜೆಡಿಎಸ್ ಪಕ್ಷದಿಂದ ಮೊದಲ ಹಂತದ ಪಂಚರತ್ನ ರಥಯಾತ್ರೆ ಬಳಿಕ, ಈಗ 2ನೇ ಹಂತದ ಯಾತ್ರೆಯನ್ನು ಜನವರಿ 5ರಿಂದ ಆರಂಭವಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿರುವಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಜನವರಿ 5ರಿಂದ ಕಲ್ಯಾಣ ಕರ್ನಾಟಕದಲ್ಲಿ 2ನೇ ಹಂತದ ಪಂಚರತ್ನ ರಥಯಾತ್ರೆಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.

ಜನವರಿ 5 ರಿಂದ 8ರವರೆಗೆ ಬೀದರ್ ಜಿಲ್ಲೆಯಲ್ಲಿ ಯಾತ್ರೆ ಕೈಗೊಳ್ಳಲಾಗುತ್ತದೆ. ಈ ಬಳಿಕ ಕಲಬುರ್ಗಿ ಜಿಲ್ಲೆ ಪ್ರವೇಶಿಸಲಿದೆ ಎಂದಿದ್ದಾರೆ.

ಅಂದಹಾಗೇ ಕಳೆದ 35 ದಿನಗಳಲ್ಲಿ 34 ಕ್ಷೇತ್ರಗಳ ವ್ಯಾಪ್ತಿಯ 3,500 ಕಿಲೋಮೀಟರ್ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ನಡೆದು, ಸುಮಾರು 2,450 ಹಳ್ಳಿಗಳನ್ನು ತಲುಪಿದೆ.