ಜೋರಾಗಿ ಡಿಜೆ ಹಾಕಿದ್ದಕ್ಕೆ ಕೋಪಗೊಂಡು 'ಗರ್ಭಿಣಿ' ಮೇಲೆ ಗುಂಡು ಹಾರಿಸಿದ ನೆರೆಮನೆ ವ್ಯಕ್ತಿ.!
ನವದೆಹಲಿ: ಸಮಾರಂಭದಲ್ಲಿ ಜೋರಾಗಿ ಡಿಜೆಯನ್ನು ಹಾಕಿದ್ದಕ್ಕೆ ಕೋಪಗೊಂಡು ನೆರೆ ಮನೆಯ ಗರ್ಭಿಣಿ ಮೇಲೆ ಗುಂಡು ಹಾರಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ವಾಯವ್ಯ ದೆಹಲಿಯ ಸಿರಾಸ್ಪುರದಲ್ಲಿ ಸಿರಸ್ಪುರದ ನಿವಾಸಿ ರಂಜು (30) ಸೋಮವಾರ ತಮ್ಮ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಡಿಜೆಯನ್ನು ಹಾಕಿದ್ದರು.
ಗರ್ಭಿಣಿ ಮೇಲೆ ಗುಂಡು ಹಾರಿಸಿದ ಹರೀಶ್ ಮತ್ತು ಆತನ ಸ್ನೇಹಿತ ಅಮಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಘಟನೆಯಲ್ಲಿ ಮಹಿಳೆಯು ಮಗುವನ್ನು ಕಳೆದುಕೊಂಡಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.