ಜನಸಾಮಾನ್ಯರಿಗೆ ಬಿಗ್ ಶಾಕ್: ಬೆಂಗಳೂರಲ್ಲಿ709 ಆಂಬುಲೆನ್ಸ್ಗಳಲ್ಲಿ 340 ಸ್ಥಗಿತ.!

ಬೆಂಗಳೂರು : ಜನಸಾಮಾನ್ಯರಿಗೆ ಶಾಕಿಂಗ್ ಸುದ್ದಿಯಾಗಿದ್ದು, ಅನಾರೋಗ್ಯ ಸಮಯದಲ್ಲಿ ತುರ್ತು ಸೇವೆ ಕಲ್ಪಿಸುವ ಬಹುತೇಕ ಆಂಬುಲೆನ್ಸ್ಗಳು ಟೆಕ್ನಿಕಲ್ ಸಮಸ್ಯೆಯಿಂದ ಕೆಟ್ಟು ನಿಂತಿದೆ. ಈ ನಿಟ್ಟಿನಲ್ಲಿ ಸಿಲಿಕಾನ್ ಸಿಟಿಯ 709 ಆಂಬುಲೆನ್ಸ್ಗಳಲ್ಲಿ 340 ಆಂಬುಲೆನ್ಸ್ಗಳನ್ನು ಸ್ಥಗಿತಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.ಈ ಹಿಂದೆ ಆಂಬುಲೆನ್ಸ್ ಡ್ರೈವರ್ಗಳು ವೇತನ ಹೆಚ್ಚಳಕ್ಕಾಗಿ ತಮ್ಮ ಸೇವೆಗೆ ಬ್ರೇಕ್ ಹಾಕಿದ್ದರು ಇದೀಗ ಆಂಬುಲೆನ್ಸ್ಗಳ ಟೆಕ್ನಿಕಲ್ ಸಮಸ್ಯೆಯಿಂದಾಗಿ 340 ಆಂಬುಲೆನ್ಸ್ಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.ಇದರಿಂದ ಜನ ಸಾಮಾನ್ಗರಿಗೆ ಮತ್ತೊಂದು ಹೊಸ ಆತಂಕ ಶುರುವಾಗಿದೆ. ಬೆಂಗಳೂರು ನಗರದಲ್ಲಿ ಒಟ್ಟು 709 ಆಂಬುಲೆನ್ಸ್ಗಳಿದ್ದು, ಅದರಲ್ಲಿ 340 ಆಂಬುಲೆನ್ಸ್ಗಳು ಕೆಟ್ಟು ನಿಂತಿವೆ. ಕೆಲ ಆಂಬುಲೆನ್ಸ್ಗಳು ದುರಸ್ಥಿಗೊಳಿಸಿ ಓಡಿಸಲಾಗುತ್ತದೆ. ಶೀಘ್ರದಲ್ಲಿ 340 ಆಂಬುಲೆನ್ಸ್ ಸ್ಥಗಿತಗೊಳಿಸಿ ಹೊಸದಾಗಿ ಖರೀದಿ ಮಾಡೋ ಪ್ಲ್ಯಾನ್ಗೆ ಮುಂದಾಗಿದೆ. ಈ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.