ಜಗತ್ತಿನ 4ನೇ ಶ್ರೀಮಂತ ನಟನ ಸ್ಥಾನ ಅಲಂಕರಿಸಿದ ಭಾರತದ ನಟ

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ವಿಶ್ವದ 4ನೇ ಶ್ರೀಮಂತ ನಟನಾಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಟಾಪ್ 10ರಲ್ಲಿರುವ ಭಾರತದ ಏಕೈಕ ನಟ. ಟ್ವಿಟರ್‍ನಲ್ಲಿ ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಹಾಲಿವುಡ್‍ನ ಜೆರ್ರಿ ಸೈನ್‍ಫೀಲ್ಡ್, ಟೈಲರ್ ಪೆರ್ರಿ, ಡ್ವೆನ್ ಜಾನ್ಸನ್ ಕ್ರಮವಾಗಿ ಮೊದಲ 3 ಸ್ಥಾನದಲ್ಲಿದ್ದಾರೆ. ನಾಲ್ಕನೆ ಸ್ಥಾನದಲ್ಲಿ ಶಾರುಖ್ ಇದ್ದು ಇವರ ಒಟ್ಟಾರೆ ಆಸ್ತಿ 6,282 ಕೋಟಿ ರೂ. ಎನ್ನಲಾಗಿದೆ. ಶಾರುಖ್ ಹೊರತುಪಡಿಸಿ ಉಳಿದ 9 ನಟರೂ ಹಾಲಿವುಡ್‍ನವರೇ.