ಚುನಾವಣಾ ಆಯೋಗದ ಬಗ್ಗೆ ಸುಪ್ರೀಂ ಮಹತ್ವದ ಹೇಳಿಕೆ
ಮುಖ್ಯ ಚುನಾವಣಾ ಆಯುಕ್ತರ 'ದುರ್ಬಲ ಹೆಗಲಿನ' ಮೇಲೆ ಸಂವಿಧಾನವು ಅಪಾರ ಅಧಿಕಾರವನ್ನು ಹೊರಿಸಿದೆ. ಈ ಹುದ್ದೆಗೆ 'ಪ್ರಬಲ ಗುಣವಿರುವ ವ್ಯಕ್ತಿಯನ್ನು' ನೇಮಿಸುವುದು ಮುಖ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ತಳಮಟ್ಟದ ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂದು ಹೇಳಿರುವ ಕೋರ್ಟ್, 1990ರಿಂದ 1996ರವರೆಗೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಮಹತ್ವದ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತಂದಿದ್ದ ಟಿಎನ್ ಶೇಷನ್ ಅವರಂತಹ ಸಿಇಸಿಯನ್ನು ತಾನು ಬಯಸಿರುವುದಾಗಿ ಹೇಳಿದೆ.