ಚಿಲುಮೆ ವೋಟರ್ ಐಡಿ ಕೇಸ್‌; ಕಾಂಗ್ರೆಸ್‌ಗೂ ಮುನ್ನ ಬಿಜೆಪಿ ದೂರು

ಚಿಲುಮೆ ವೋಟರ್ ಐಡಿ ಕೇಸ್‌; ಕಾಂಗ್ರೆಸ್‌ಗೂ ಮುನ್ನ ಬಿಜೆಪಿ ದೂರು

ಬೆಂಗಳೂರು: ಚಿಲುಮೆ ಡೇಟಾ ಕಳವು ಕೇಸ್‌‌‌‌ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ಇಂದು (ನ.23) ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡುತ್ತಿರುವ ಹಿನ್ನೆಲೆ ನಿನ್ನೆ (ನ.22) ರಾತ್ರಿಯೇ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ಫ್ಯಾಕ್ಸ್‌ ಮೂಲಕ ದೂರು ಸಲ್ಲಿಕೆ ಆಗಿದೆ. ಚಿಲುಮೆ ಸಂಸ್ಥೆಯ ನೇಮಕ ಮಾಡಿದ್ದೇ ಕಾಂಗ್ರೆಸ್‌. ಈ ಕೇಸ್‌ನಲ್ಲಿ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ದೂರು ಸಲ್ಲಿಸಿದ್ದಾರೆ.